23 ವರ್ಷದ ಮಹಿಳೆಗೆ ಮೊದಲಬಾರಿಗೆ ರೋಬೋಟಿಕ್ ಮೂಲಕ ಯಶಸ್ವಿ“ಯೋನಿ ಪುನರ್ ರ್ನಿರ್ಮಾಣ ಶಸ್ತ್ರಚಿಕಿತ್ಸೆ - Mahanayaka
2:59 PM Thursday 20 - November 2025

23 ವರ್ಷದ ಮಹಿಳೆಗೆ ಮೊದಲಬಾರಿಗೆ ರೋಬೋಟಿಕ್ ಮೂಲಕ ಯಶಸ್ವಿ“ಯೋನಿ ಪುನರ್ ರ್ನಿರ್ಮಾಣ ಶಸ್ತ್ರಚಿಕಿತ್ಸೆ

banglore
11/05/2023

ಬೆಂಗಳೂರು: ಅಪರೂಪದ ಅನುವಂಶಿಕ ಕಾಯಿಲೆಯಾದ “ವೃಷಣ ಫೆಮಿನೈಸೇಶನ್ ಸಿಂಡ್ರೋಮ್”ನಿಂದ ಬಳಲುತ್ತಿದ್ದ 23 ವರ್ಷದ ಮಹಿಳೆಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡವು “ಯೋನಿ ಪುನರ್‌ನಿರ್ಮಾಣ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಿದೆ.

ಈ ಕುರಿತು ಮಾತನಾಡಿದ ವೈದ್ಯ, ಈ ಮಹಿಳೆ ತಾನು ೬ ವರ್ಷವಿರುವಾಗಲದೇ ವೃಷಣ ಫೆಮಿನೈಸೇಶನ್‌ ಸಿಂಡ್ರೋಮ್‌ ಎಂಬ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಳು. ಇದರಿಂದ ಆಕೆಗೆ ಎಲ್ಲಾ ಹೆಣ್ಣುಮಕ್ಕಳ ರೀತಿ ಮುಟ್ಟು ಸಹ ಆರಂಭವಾಗಿರಲಿಲ್ಲ. ಈ ಕಾಯಿಲೆಯ ಮತ್ತೊಂದು ವಿಚಿತ್ರವೆಂದರೆ, ಆಕೆಯ ಹೊಟ್ಟೆಯಲ್ಲಿ ವೃಷಣ (ಪುರುಷ ವೃಷಣ)ದ ಲಕ್ಷಣಗಳು ಗೋಚರಿಸಿದ್ದವು. ಈ ಕಾಯಿಲೆಯನ್ನು ಆಂಡ್ರೋಜೆನ್‌ ಇನ್‌ಸೆನ್ಸಿವಿಟಿ ಸಿಂಡ್ರೋಮ್‌ (AIS) ಎಂದೂ ಕರೆಯಲಾಗುತ್ತದೆ.

ಇದು ಅತ್ಯಂತ ಅಪರೂಪದ ಕಾಯಿಲೆಯಾಗಿದ್ದು 10 ಸಾವಿರ ಜನರಲ್ಲಿ ಒಬ್ಬರಲ್ಲಿ ಕಂಡು ಬರಲಿದೆ. ಈ ಕಾಯಿಲೆಯಿಂದ ಆಕೆಯು ಹೆಣ್ಣಾಗಿದ್ದರೂ, ಗಂಡಿನ ಚಹರೆ ಹಾಗೂ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಆದರೆ, ಲೈಂಗಿಕ ಭಾವದಲ್ಲಿ ಪುರುಷರ ಲೈಂಗಿಕ ಆಸಕ್ತಿಯನ್ನು ಒಳಗೊಂಡಿರುವುದಿಲ್ಲ. ಇಂತಹ ಸಮಸ್ಯೆ ಹೊಂದಿರುವ ಮಹಿಳೆಯರು ಚಿಕ್ಕದಾದ ಅಥವಾ ಮುಚ್ಚಿದ ಯೋನಿಯನ್ನು ಹೊಂದಿರುತ್ತಾರೆ.

ಒಳಗಡೆ ಪುರುಷ ಸಂತಾನೋತ್ಪತ್ತಿ ಹೊಂದಿ, ಬಾಹ್ಯದಲ್ಲಿ ಸ್ತ್ರೀ ಅಂಗಗಳನ್ನು ಹೊಂದಿದ್ದ ಈ ಮಹಿಳೆಯು, ಸಾಕಷ್ಟು ಕಡೆ ಆಸ್ಪತ್ರೆಗೆ ತೆರಳಿದರೂ ಈ ಕಾಯಿಲೆ ಸೂಕ್ತ ಚಿಕಿತ್ಸೆ ದೊರೆತಿರಲಿಲ್ಲ. ನಮ್ಮ ತಂಡವು ಆಕೆಯ ಸಮಸ್ಯೆಯನ್ನು ಆಲಿಸಿ, ಇದೇ ಮೊದಲ ಬಾರಿಗೆ ರೋಬೋಟಿಕ್ ಯೋನಿ ಪುನರ್ನಿರ್ಮಾಣ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದೆವು.

ರೋಗಿಯಲ್ಲಿ ಯೋನಿಯನ್ನು ಪುನರ್‌ರಚಿಸಲು ಇಲಿಯಾಲ್ ಲೂಪ್ (ಮೂತ್ರವನ್ನು ದೇಹದಿಂದ ನಿರ್ಗಮಿಸಲು ಅನುಮತಿಸುವ ಒಂದು ಸಣ್ಣ ತೆರೆಯುವಿಕೆ) ಬಳಸಿಕೊಂಡು ರೋಬೋಟಿಕ್ ಲ್ಯಾಪರೊಸ್ಕೋಪಿಕ್ಯನ್ನು ಬಳಸಿಕೊಂಡಿದ್ದೇವೆ ಎಂದು ವಿವರಿಸಿದರು.

ಪ್ರಸ್ತುತ ರೋಗಿಯು ಆರೋಗ್ಯವಾಗಿದ್ದಾರೆ. ಆದರೆ, ಈ ಶಸ್ತ್ರಚಿಕಿತ್ಸೆಯ ಜೊತೆಗೆ, ಜೀವಿತಾವಧಿಯವರೆಗೂ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿಯನ್ನು ತೆಗೆದುಕೊಳ್ಳುತ್ತಿರಬೇಕು. ಇಲ್ಲವಾದಲ್ಲಿ, ಭವಿಷ್ಯದಲ್ಲಿ ಮಕ್ಕಳಾಗುವ ಸಾಧ್ಯತೆ ಕಡಿಮೆ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ