ಹೃದಯ ವಿದ್ರಾವಕ ಘಟನೆ: ಕ್ಯಾಂಟರ್ ಚಕ್ರದಡಿಗೆ ಸಿಲುಕಿ 4 ವರ್ಷದ ಮಗು ಸಾವು - Mahanayaka
7:54 PM Wednesday 29 - October 2025

ಹೃದಯ ವಿದ್ರಾವಕ ಘಟನೆ: ಕ್ಯಾಂಟರ್ ಚಕ್ರದಡಿಗೆ ಸಿಲುಕಿ 4 ವರ್ಷದ ಮಗು ಸಾವು

banglore
01/04/2024

ಬೆಂಗಳೂರು: ನಾಲ್ಕು ವರ್ಷದ ಮಗುವೊಂದು ಕ್ಯಾಂಟರ್ ಚಕ್ರದಡಿಗೆ ಸಿಲುಕಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಲಾಲ್ ಬಾಗ್ ರಸ್ತೆಯ ಊರ್ವಶಿ ಥಿಯೇಟರ್ ಬಳಿ ನಡೆದಿದೆ.

ಕ್ಯಾಂಟರ್ ರಿವರ್ಸ್ ತೆಗೆಯುತ್ತಿದ್ದ ವೇಳೆ ಮಗು ಚಕ್ರದಡಿಗೆ ಸಿಲುಕಿ ಸಾವನ್ನಪ್ಪಿದೆ. ಡ್ರೈವರ್ ಸರಿಯಾಗಿ ಗಮನಿಸದೇ ರಿವರ್ಸ್ ತೆಗೆದ ಪರಿಣಾಮ ಮಗು ಬಲಿಯಾಗಿದೆ ಎಂದು ಹೇಳಲಾಗಿದೆ.

ಸ್ಥಳದಲ್ಲಿ ಸ್ಥಳೀಯರು ಚಾಲಕನ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಕಲಾಸಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ