ಕಾಡಾನೆಯ ದಾಳಿಗೆ 60 ವರ್ಷದ ವ್ಯಕ್ತಿ ದಾರುಣ ಸಾವು

18/08/2023
ಚಾಮರಾಜನಗರ: ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ತೋಕೆರೆ ಸಮೀಪ ನಡೆದಿದೆ.
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಚೆನ್ನ ಮಾದಯ್ಯ (60)ಮೃತಪಟ್ಟ ದುರ್ದೈವಿ. ಚೆನ್ನಮಾದಯ್ಯ ಅನ್ಯ ಕಾರ್ಯ ನಿಮಿತ್ತ ತೋಕೆರೆ ಗ್ರಾಮಕ್ಕೆ ತೆರಳಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.