ಫ್ರಿಡ್ಜ್ ನೊಳಗೆ ಇಟ್ಟಿದ್ದ ಹೂಕೋಸಿನೊಳಗೆ ಹಾವಿನ ಮರಿ ಪತ್ತೆ

ಉಡುಪಿ: ಫ್ರಿಡ್ಜ್ ನೊಳಗೆ ಇಟ್ಟಿದ್ದ ಹೂಕೋಸಿನೊಳಗೆ ಹಾವಿನ ಮರಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಕಾಪು ತಾಲೂಕು ಪಡುಬಿದ್ರೆಯಲ್ಲಿ ಬೇಂಗ್ರೆಯಲ್ಲಿ ನಡೆದಿದೆ.
ಇಲ್ಲಿನ ಮಹಿಳೆಯೊಬ್ಬರು ಫ್ರಿಡ್ಜ್ ನಲ್ಲಿ ತರಕಾರಿ ಇಟ್ಟಿದ್ದರು. ಅಡುಗೆ ಮಾಡುವುದಕ್ಕಾಗಿ ಫ್ರಿಡ್ಜ್ ನಲ್ಲಿಟ್ಟಿದ್ದ ತರಕಾರಿ ತೆಗೆದು ಕತ್ತರಿಸಲು ಮುಂದಾಗಿದ್ದಾರೆ. ಈ ವೇಳೆ ಹೂಕೋಸಿನ ಒಳಭಾಗದಿಂದ ಹಾವಿನ ಮರಿ ಹೊರಗೆ ಬರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಬಳಿಕ ಉರಗ ತಜ್ಞರಿಗೆ ಅವರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಉರಗ ತಜ್ಞರು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಇದು ಮರಿ ಹೆಬ್ಬಾವು ಎಂದು ಉರಗ ತಜ್ಞರು ಗುರುತಿಸಿದ್ದಾರೆ.
ಮಳೆಗಾಲದಲ್ಲಿ ಹಾವುಗಳು ಸುರಕ್ಷಿತ ಸ್ಥಳಗಳನ್ನು ನೋಡಿ ಮರಿ ಇಡುತ್ತವೆ ಅಂತೆಯೇ ಹೂಕೋಸಿನ ನಡುವೆ ಮರಿ ಅವಿತುಕುಳಿತಿರಬಹುದು ಎಂದು ಹೇಳಲಾಗಿದೆ. ಮಳೆಗಾಲದಲ್ಲಿ ತರಕಾರಿಗಳನ್ನು ಬಳಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಿದೆ. ಅದರಲ್ಲೂ ಸೂಕ್ಷ್ಮ ತರಕಾರಿಗಳನ್ನು ಬಳಸುವ ವೇಳೆ ಸರಿಯಾಗಿ ಗಮನಿಸಿ ಬಳಸಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97