ಅಲೆಗಳ ಅಬ್ಬರಕ್ಕೆ ಮಗುಚಿ ಬಿದ್ದ ದೋಣಿ: ಇಬ್ಬರು ಮೀನುಗಾರರು ನೀರುಪಾಲು - Mahanayaka

ಅಲೆಗಳ ಅಬ್ಬರಕ್ಕೆ ಮಗುಚಿ ಬಿದ್ದ ದೋಣಿ: ಇಬ್ಬರು ಮೀನುಗಾರರು ನೀರುಪಾಲು

boat
18/12/2023

ಉಡುಪಿ:  ಅಲೆಗಳ ಅಬ್ಬರಕ್ಕೆ ಸಿಲುಕಿದ ದೋಣಿಯೊಂದು ಮಗುಚಿದ ಪರಿಣಾಮ ಇಬ್ಬರು ಮೀನುಗಾರರು ಸಮುದ್ರ ಪಾಲಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ನಡೆದಿ ಭಾನುವಾರ ರಾತ್ರಿ ನಡೆದಿದೆ.

ಶಿರೂರು ಮೂಲದ ಅಬ್ದುಲ್‌ ಸತ್ತಾರ್‌ (45) ಹಾಗೂ ಭಟ್ಕಳ ಮೂಲದ ಮಹಮ್ಮದ್‌ ಯೂಸೂಫ್‌ ನಿಸ್ಬಾ(49) ನೀರುಪಾಲಾದ ಮೀನುಗಾರರು ಎಂದು ಗುರುತಿಸಲಾಗಿದೆ.

ಶಿರೂರು ಕಳಿಹಿತ್ಲು ಎಂಬಲ್ಲಿಂದ ಹೊರಟಿದ್ದ ದೋಣಿ ಅಲೆಗಳ ಅಬ್ಬರಕ್ಕೆ ಮಗುಚಿ ಬಿದ್ದಿದೆ. ಘಟನೆ ವೇಳೆ ದೋಣಿಯಲ್ಲಿ ಮೂವರು ಮೀನುಗಾರರು ಇದ್ದರು. ಇಬ್ಬರು ನೀರುಪಾಲಾಗಿದ್ದರೆ ಒಬ್ಬರು ಪಾರಾಗಿದಾರೆ.

ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

ಇತ್ತೀಚಿನ ಸುದ್ದಿ