ವೃದ್ಧನ ಮೇಲೆ ಭೀಕರವಾಗಿ ದಾಳಿ ಮಾಡಿದ ಗೂಳಿ: ಬೆಚ್ಚಿಬೀಳಿಸುವಂತಿದೆ ಸಿಸಿ ಟಿವಿ ದೃಶ್ಯ - Mahanayaka
8:15 AM Thursday 6 - November 2025

ವೃದ್ಧನ ಮೇಲೆ ಭೀಕರವಾಗಿ ದಾಳಿ ಮಾಡಿದ ಗೂಳಿ: ಬೆಚ್ಚಿಬೀಳಿಸುವಂತಿದೆ ಸಿಸಿ ಟಿವಿ ದೃಶ್ಯ

bull attack
25/01/2024

ಬರೇಲಿ: ಬಿಡಾಡಿ ಗೂಳಿಯ ದಾಳಿಗೆ ವೃದ್ಧರೊಬ್ಬರು ಬಲಿಯಾಗಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

ವೃದ್ದರೊಬ್ಬರು ಎಂದಿನಂತೆ ಬೆಳಗೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಗೂಳಿಯು ಏಕಾಏಕಿ ಮೇಲೆ ದಾಳಿ ಮಾಡಿದ್ದು, ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಗೂಳಿಯು ವೃದ್ಧನನ್ನು ನೆಲಕ್ಕೆ ಕೆಡವಿ ಹೊಟ್ಟೆಗೆ ಪದೇ ಪದೇ ತಿವಿದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಇತ್ತೀಚಿನ ಸುದ್ದಿ