ಠೇವಣಿ ಇಡಲು 10 ಸಾವಿರ ರೂಪಾಯಿಯ ನಾಣ್ಯ ತಂದ ಅಭ್ಯರ್ಥಿ: ಚುನಾವಣಾಧಿಕಾರಿಗಳು ಸುಸ್ತು

ರಾಣೆಬೆನ್ನೂರು: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಅವರು ಚುನಾವಣೆಗೆ ಹಣ ಠೇವಣಿ ಇಡಲು ತಾವು 5 ವರ್ಷಗಳಿಂದ ಕೂಡಿಟ್ಟ ₹10 ಸಾವಿರ ಮೌಲ್ಯದ ನಾಣ್ಯಗಳನ್ನು ತಂದಿದ್ದರು.
ಇದನ್ನು ಎಣಿಸಲು ಚುನಾವಣೆ ಸಿಬ್ಬಂದಿ ಹೈರಾಣಾದ ಘಟನೆ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆಯಿತು.
‘ನಾನೊಬ್ಬ ಬಡ ರೈತ, ಕೂಲಿ ನಾಲಿಯಿಂದ ಬಂದ ಹಣವನ್ನು ಕಳೆದ 5 ವರ್ಷಗಳಿಂದ ಸಂಗ್ರಹಿಸಿಟ್ಟಿದ್ದೇನೆ. ಠೇವಣಿ ಇಡಲು ನನ್ನ ಹತ್ತಿರ ಗರಿ ಗರಿ ನೋಟಿಲ್ಲ. ಇದ್ದ ಚಿಲ್ಲರೆ ಹಣ ತಂದಿದ್ದೇನೆ’ ಎಂದು ಎಎಪಿ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಹೇಳಿದಾಗ ಚುನಾವಣೆ ಸಿಬ್ಬಂದಿ ನಗೆಗಡಲಲ್ಲಿ ತೇಲಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw