ಹೋಮ್ ಸ್ಟೇನಲ್ಲಿ ತಂಗಿದ್ದ ಕೇರಳ ಮೂಲದ ದಂಪತಿ, ಮಗು ಸಾವಿಗೆ ಶರಣು!

09/12/2023
ಮಡಿಕೇರಿ: ಹೋಮ್ ಸ್ಟೇನಲ್ಲಿ ತಂಗಿದ್ದ ಕೇರಳದ ಕೊಲ್ಲಂ ನಗರದ ನಿವಾಸಿಗಳಾಗಿರುವ ದಂಪತಿ, ಹಾಗೂ ಮಗುವಿನ ಮೃತದೇಹ, ಆತ್ಮಹತ್ಯೆಗೆ ಶರಣಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ.
ವಿನೋದ್ ಹಾಗೂ ಅವರ ಪತ್ನಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಮಗುವಿನ ಮೃತದೇಹ ಹಾಸಿಗೆಯ ಮೇಲೆ ದೊರೆತಿದೆ.
ವಿನೋದ್ ಅವರ ಪತ್ನಿ ಹಾಗೂ ಮಗುವಿನ ಬಗ್ಗೆ ವಿವರಗಳು ತಿಳಿದು ಬಂದಿಲ್ಲ, ಅವರ ಸಂಬಂಧಿಕರೊಬ್ಬರು ಸಂಪರ್ಕಕ್ಕೆ ಸಿಕ್ಕಿದ್ದು, ಅವರು ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಸದ್ಯ ಮಗುವನ್ನು ಕೊಂದು ದಂಪತಿ ಸಾವಿಗೆ ಶರಣಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಶುಕ್ರವಾರ ಇವರು ಹೋಮ್ ಸ್ಟೇಗೆ ಬಂದು ತಂಗಿದ್ದರು. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.