ಜನಪ್ರಿಯ ರೆಸ್ಟೋರೆಂಟ್ ನ ಸಾಂಬರ್ ನಲ್ಲಿ ಸತ್ತ ಇಲಿ ಪತ್ತೆ!

ನವದೆಹಲಿ: ಇತ್ತೀಚೆಗೆ ಆನ್ ಲೈನ್ ನಲ್ಲಿ ಆರ್ಡರ್ ಮಾಡುವ ಆಹಾರ ಹಾಗೂ ಹೊಟೇಲ್ ಗಳ ಆಹಾರಗಳಲ್ಲಿ ಹುಳುಹುಪ್ಪಟೆಗಳು ಪತ್ತೆಯಾಗುತ್ತಿದೆ. ಇದು ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದೆ.
ಇತ್ತೀಚೆಗಷ್ಟೇ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಕೋನ್ ಐಸ್ ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು. ಬಳಿಕ ಅಮುಲ್ ಐಸ್ ಕ್ರೀಂನಲ್ಲಿ ಜರಿ ಕಂಡುಬಂದಿತ್ತು. ಇತ್ತೀಚೆಗಷ್ಟೇ ಬೆಂಗಳೂರಿನ ದಂಪತಿಗೆ ಅಮೆಜಾನ್ ಪ್ಯಾಕೇಜ್ ನಲ್ಲಿ ಜೀವಂತ ನಾಗರಹಾವು ಪತ್ತೆಯಾಗಿತ್ತು. ಇದೀಗ ಮತ್ತೊಂದು ಅಂತಹದ್ದೇ ಘಟನೆ ವರದಿಯಾಗಿದೆ.
ಅಹಮದಾಬಾದ್ನ ಜನಪ್ರಿಯ ರೆಸ್ಟೋರೆಂಟ್ ಒಂದರ ಸಾಂಬಾರ್ ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಉಂಟಾಗಿದೆ.
ನಿಕೋಲ್ ನಲ್ಲಿರುವ ದೇವಿ ದೋಸೆ ರೆಸ್ಟೊರೆಂಟ್ ನಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅಹಮದಾಬಾದ್ ನ ದೇವಿ ದೋಸೆ ಫುಡ್ ಜಾಯಿಂಟ್ನಲ್ಲಿ ಗ್ರಾಹಕರಿಗೆ ನೀಡಿದ್ದ ಸಾಂಬಾರ್ನಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಈ ಸಂಬಂಧ ಗ್ರಾಹಕರು ಅಮ್ದಾವದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ)ಗೆ ಮಾಹಿತಿ ನೀಡಿದ್ದು, ಆರೋಗ್ಯ ಇಲಾಖೆಯು ರೆಸ್ಟೋರೆಂಟ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97