ಒಂದು ಕುಟುಂಬ ಕನಿಷ್ಠ ಮೂವರು ಮಕ್ಕಳನ್ನು ಹೊಂದಬೇಕು: ಆರ್‌ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಕರೆ - Mahanayaka
8:59 AM Wednesday 28 - January 2026

ಒಂದು ಕುಟುಂಬ ಕನಿಷ್ಠ ಮೂವರು ಮಕ್ಕಳನ್ನು ಹೊಂದಬೇಕು: ಆರ್‌ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಕರೆ

02/12/2024

ಭಾರತದಲ್ಲಿ ಜನಸಂಖ್ಯೆಯ ಅನುಪಾತ ಕಡಿಮೆಯಾಗದಿರುವುದಕ್ಕಾಗಿ ಒಂದು ಕುಟುಂಬ ಕನಿಷ್ಠ ಮೂವರು ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಕರೆಕೊಟ್ಟಿದ್ದಾರೆ. ಒಂದು ಸಮೂಹದ ನೆಲೆ ನಿಲ್ಲುವಿಕೆಗೆ ಜನಸಂಖ್ಯಾ ಸ್ಥಿರತೆ ಅನಿವಾರ್ಯ ಎಂದವರು ತನ್ನ ಕರೆಗೆ ಸಮರ್ಥನೆ ಕೊಟ್ಟಿದ್ದಾರೆ.

ನಾಗಪುರದಲ್ಲಿ ನಡೆದ ಸಭೆಯಲ್ಲಿ ಅವರು ಮಾತಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಆಧುನಿಕ ಜನಸಂಖ್ಯಾ ಶಾಸ್ತ್ರದ ಪ್ರಕಾರ ಒಂದು ಸಮೂಹವು ಜನಸಂಖ್ಯೆಯ 2.1 ಅನುಪಾತದಷ್ಟು ಇರದೇ ಹೋದರೆ ಆ ಸಮೂಹ ಜನಾಂಗ ನಾಶಕ್ಕೆ ತುತ್ತಾಗಲಿದೆ ಎಂದು ಹೇಳಲಾಗುತ್ತೆ. ಇಂಥ ಸಮೂಹವು ನಾಶವಾಗುವುದಕ್ಕೆ ಹೊರಗಿನ ಬೆದರಿಕೆಗಳೇ ಬೇಕಾಗಿಲ್ಲ. ಆದ್ದರಿಂದ ನಮ್ಮ ಜನಸಂಖ್ಯಾ ಅನುಪಾತವು 2.1ಕ್ಕಿಂತ ಕೆಳಗೆ ಜಾರಬಾರದು.

ಜಗತ್ತಿನ ಅನೇಕ ಭಾಷೆಗಳು ಮತ್ತು ಸಮೂಹಗಳು ಈ ಕಾರಣಕ್ಕಾಗಿ ನಾಶವಾಗಿವೆ ಎಂದವರು ಹೇಳಿದ್ದಾರೆ.
1998 ಮತ್ತು 2002ರಲ್ಲಿ ಮಂಡಿಸಲಾದ ಜನಸಂಖ್ಯೆ ಅನುಪಾತಕ್ಕೆ ಸಂಬಂಧಿಸಿ ಹೇಳುವುದಾದರೆ ಭಾರತ ನಿಧಾನಕ್ಕೆ 2.1 ಅನುಪಾತದಿಂದ ಕೆಳಗಿಳಿಯುತ್ತಿದೆ. ಆದ್ದರಿಂದ ಒಂದು ಕುಟುಂಬ ಕನಿಷ್ಠ ಮೂರು ಮಕ್ಕಳು ಹೊಂದುವುದು ಅಗತ್ಯ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ