ಡಾ.ಕೆ.ಸುಧಾಕರ್ ಸೋಲಿಗೆ ನೊಂದು ಅಭಿಮಾನಿ ಸಾವಿಗೆ ಶರಣು! - Mahanayaka
3:11 PM Wednesday 15 - October 2025

ಡಾ.ಕೆ.ಸುಧಾಕರ್ ಸೋಲಿಗೆ ನೊಂದು ಅಭಿಮಾನಿ ಸಾವಿಗೆ ಶರಣು!

dr sudhakar
15/05/2023

ಚಿಕ್ಕಬಳ್ಳಾಪುರ: ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಸೋಲಿನಿಂದ ನೊಂದ ಅಭಿಮಾನಿಯೋರ್ವ ಕೆರೆಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ವಡ್ರೆಪಾಳ್ಯದಲ್ಲಿ ನಡೆದಿದೆ.


Provided by

ಚಿತ್ತಾರ ವೆಂಕಟೇಶ ಎಂಬವರು ಸಾವಿಗೆ ಶರಣಾದವರಾಗಿದ್ದು, ಇವರು ಸುಧಾಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದರು ಎನ್ನಲಾಗಿದೆ. ಸುಧಾಕರ್ ಸೋಲಿನಿಂದ ನೊಂದು ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನ ಪ್ರದೀಪ್ ಈಶ್ವರ್ 10,642 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದರು.  ರಾಜಕಾರಣಕ್ಕೆ ಹೊಸದಾಗಿ ಪಾದರ್ಪಣೆ ಮಾಡಿ, ಕೆಲವೇ ತಿಂಗಳುಗಳ ಕಾಲ ಪ್ರಚಾರ ನಡೆಸಿ ಜನರ ಮನಸ್ಸು ಗೆದ್ದಿದ್ದ ಪ್ರದೀಪ್ ಚಿಕ್ಕಬಳ್ಳಾಪುರದ ಪ್ರಭಾವಿ ಡಾ.ಸುಧಾಕರ್ ಅವರಿಗೆ ಸೋಲಿನ ರುಚಿ ತೋರಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ