ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ರೈತ

ಚಿಕ್ಕಮಗಳೂರು: ಆಲೂಗಡ್ಡೆ ಬೀಜ ಬಿತ್ತಿ 15 ದಿನಗಳಾದರೂ ಮೊಳಕೆಯೊಡೆಯದ ಹಿನ್ನೆಲೆಯಲ್ಲಿ ಬೆಳೆ ಬೆಳೆದಿದ್ದ 10 ಎಕರೆ ಜಮೀನಿನ ಮೇಲೆ ರೈತ ಟ್ರ್ಯಾಕ್ಟರ್ ಹರಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಸಿರ್ಗಾಪುರ ಗ್ರಾಮದಲ್ಲಿ ನಡೆದಿದೆ.
ಆಲೂಗಡ್ಡೆ ಬೀಜ ನೆಲದಲ್ಲಿ ಕರಗಿರೋದ್ರಿಂದ ಮನನೊಂದ ರೈತ ಟ್ರ್ಯಾಕ್ಟರ್ ಹರಿಸಿದ್ದು, ಆಲೂಗಡ್ಡೆ ಮಂಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಾಸನದ ಆಲೂಗಡ್ಡೆ ಮಂಡಿಯಲ್ಲಿ ಸುಮಾರು 60—70 ರೈತರು ಮೂರು ಲಾರಿಗಳಲ್ಲಿ ಆಲೂಗಡ್ಡೆ ಬೀಜ ತಂದಿದ್ದರು. 5 ದಿನದಲ್ಲೇ ಬೀಜ ಮೊಳಕೆಯೊಡೆಯುತ್ತೆ ಎಂದು ಹೇಳಿದ್ದರು. ಆದರೆ 15 ದಿನಗಳು ಕಳೆದರೂ ಆಲೂಗಡ್ಡೆ ಬೀಜ ಮೊಳಕೆಯೊಡೆಯದೇ ಇದ್ದಾಗ ರೈತರು ಕಂಗಾಲಾಗಿದ್ದಾರೆ.
ನಾವು ಸಾಲ ಮಾಡಿ, ಕೆಲಸಕ್ಕೆ ಜನ ತೆಗೆದುಕೊಂಡು ಕೃಷಿ ಮಾಡಿದ್ದೇವೆ. ಸಾಕಷ್ಟು ಹಣ ನೀಡಿ ಗೊಬ್ಬರ ತೆಗೆದುಕೊಂಡಿದ್ದೇವೆ. ಆದರೆ ಈಗ ಬೆಳೆ ಬೆಳೆಯದೇ ಸಂಕಷ್ಟದಲ್ಲಿದ್ದೇವೆ. ಸರ್ಕಾರವೇ ಇದಕ್ಕೆ ಕ್ರಮಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw