ಸತ್ತಿರೋ ಮರಿಯನ್ನು ಹುಡುಕಿಕೊಂಡು 150 ಕಿ.ಮೀ. ಬಂದ ಹೆಣ್ಣಾನೆ - Mahanayaka

ಸತ್ತಿರೋ ಮರಿಯನ್ನು ಹುಡುಕಿಕೊಂಡು 150 ಕಿ.ಮೀ. ಬಂದ ಹೆಣ್ಣಾನೆ

elephant
30/07/2025


Provided by

ಚಿಕ್ಕಮಗಳೂರು:  ಮನುಷ್ಯರು ತಮ್ಮ ಮಕ್ಕಳನ್ನು ಕಳೆದುಕೊಂಡರೆ,  ಅದೇ ಕೊರಗಿನಲ್ಲಿ ದಿನ ದೂಡುತ್ತಾರೆ. ಅದೇ ರೀತಿಯಲ್ಲಿ ಪ್ರಾಣಿಗಳಿಗೂ ಭಾವನೆಗಳಿವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಮೂಕ ಪ್ರಾಣಿ ಪ್ರಪಂಚದ ವಿಸ್ಮಯ ಜಗತ್ತು ಅನಾವರಣಗೊಂಡಿದೆ.

ಹೌದು..! ಸತ್ತಿರೋ ಮರಿ ಹುಡುಕಿಕೊಂಡು 150 ಕಿ.ಮೀ.ವರೆಗೆ ಕಾಡಾನೆಯೊಂದು ಬಂದಿದೆ. ಕೊಡಗು ಜಿಲ್ಲೆಯ ಪಾಲಿ ಬೆಟ್ಟದಿಂದ ಮೂಡಿಗೆರೆಗೆ ಕಾಡಾನೆ ಬಂದಿದೆ. ಈ ಕಾಡಾನೆಯನ್ನು ಓಲ್ಟ್ ಬೆಲ್ಟ್ ಅಂತ ಕರೆಯುತ್ತಾರೆ. ಓಲ್ಡ್ ಬೆಲ್ಟ್ ಕೊರಳಲ್ಲಿರೋ ರೆಡಿಯೋ ಕಾಲರ್ ನಿಂದಾಗಿ ಈ ಆನೆಯನ್ನು ಗುರುತಿಸಲಾಗಿದೆ.

ಮಡಿಕೇರಿಯ ಪಾಲಿ ಬೆಟ್ಟದಲ್ಲಿ ಜನರ ಓಡಿಸಿದ್ದ ಓಲ್ಡ್ ಬೆಲ್ಟ್ ಆನೆ ಮೂಡಿಗೆರೆಗೆ ಆಗಮಿಸಿದೆ.  ಸಂಜೆ ವೇಳೆಗೆ ತನ್ನ ಮರಿಯನ್ನು ಹುಡುಕಿಕೊಂಡು ಮೂಡಿಗೆರೆ ತಾಲೂಕಿನ ಗೋಣಿಬೀಡಿಗೆ ಆಗಮಿಸಿದೆ. ಓಲ್ಡ್ ಬೆಲ್ಟ್ ಕೊರಳಲ್ಲಿರೋ ರೆಡಿಯೋ ಕಾಲರ್ ನಿಂದ ಲೊಕೇಶನ್ ಮಾಹಿತಿ ಲಭ್ಯವಾಗಿದೆ.

ಸದ್ಯಕ್ಕೆ ಬೇಲೂರು–ಮೂಡಿಗೆರೆಯ ಗಡಿಯ ಲಕ್ಷ್ಮಿ ಎಸ್ಟೇಟ್ ನಲ್ಲಿದೆಯೆಂಬ ಮಾಹಿತಿ ದೊರೆತಿದೆ. ಓಲ್ಡ್ ಬೆಲ್ಟ್ ಮರಿ ತಿಂಗಳುಗಳ ಮುಂಚೆಯೇ ಸಾವನ್ನಪ್ಪಿದೆ. ಆದರೆ, ಸಾವನ್ನಪ್ಪಿರೋ ಮರಿ ಹುಡುಕಿಕೊಂಡು 150 ಕಿ.ಮೀ. ದೂರ ಹೆಣ್ಣಾನೆ ಬಂದಿದೆ.

ಬುದ್ದಿವಂತ ಪ್ರಾಣಿ ಮನುಷ್ಯನ ಪ್ರೀತಿಯನ್ನೂ ಕಾಡಾನೆ ಮೀರಿದಿದೆ. ತಿಂಗಳ ಹಿಂದೆ ಸಾವನ್ನಪ್ಪಿದ ತನ್ನ ಮರಿಗಾಗಿ ಹೆಣ್ಣಾನೆ ಹುಡುಕಾಡುತ್ತಾ ಅಡ್ಡಾಡುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ