ಕಾಫಿನಾಡನ್ನು ಬೆಚ್ಚಿಬೀಳಿಸಿದ ಮುಸುಕುಧಾರಿ ಕಳ್ಳರ ಗ್ಯಾಂಗ್! - Mahanayaka

ಕಾಫಿನಾಡನ್ನು ಬೆಚ್ಚಿಬೀಳಿಸಿದ ಮುಸುಕುಧಾರಿ ಕಳ್ಳರ ಗ್ಯಾಂಗ್!

chikkamagaluru
24/06/2025


Provided by

ಚಿಕ್ಕಮಗಳೂರು: ಕಾಫಿನಾಡಲ್ಲಿ ಮಾರಕಾಸ್ತ್ರ ಹಿಡಿದ ಮುಸುಕುಧಾರಿ ಕಳ್ಳರ ಗ್ಯಾಂಗ್ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ್ದು, 6 ಜನ ಕಳ್ಳರ ಗ್ಯಾಂಗ್ ಮುಸುಕುಧಾರಿಗಳಾಗಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು  ಕಳ್ಳತನಕ್ಕೆ ಹೊಂಚು ಹಾಕುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಚಿಕ್ಕಮಗಳೂರು ನಗರದ ಬೈಪಾಸ್, ದಂಟರಮಕ್ಕಿ, ಒಂಟಿ ಮನೆಗಳನ್ನು ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ.

ರಾಮಕೃಷ್ಣ ಕಾಲೇಜ್ ಸಮೀಪ ಮನೆಯೊಂದರಲ್ಲಿ ಕಳ್ಳರಗ್ಯಾಂಗ್ ದರೋಡೆ ಮಾಡಿದೆ. ಸಿಸಿಟಿವಿಯಲ್ಲಿ ಕಳ್ಳರ ಭಯಾನಕ ತಿರುಗಾಟ ಸೆರೆಯಾಗಿದೆ.

ಮನೆಗಳಿಗೆ ಟಾರ್ಚ್ ಬಿಟ್ಟು ನೋಡುವ ಕಳ್ಳರ ಗ್ಯಾಂಗ್, ಭಾನುವಾರ ರಾತ್ರಿ 2 ಗಂಟೆಯಿಂದ 3.30ರ ವರೆಗೂ ಓಡಾಟ ನಡೆಸಿದೆ. ಕಳ್ಳರ ಓಡಾಟವನ್ನ ಕಂಡು ಚಿಕ್ಕಮಗಳೂರು ನಗರ ನಿವಾಸಿಗಳು ಆತಂಕದಲ್ಲಿದ್ದಾರೆ.

ಆಯುಧಗಳ ಸಮೇತ 6 ಜನ ಕಳ್ಳರ ಗ್ಯಾಂಗ್ ಸುತ್ತಾಡುತ್ತಿದ್ದು, ಮಧ್ಯರಾತ್ರಿ ಮನೆಗಳಿಗೆ ನುಗ್ಗಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ