ಅಟ್ಟಾಡಿಸಿಕೊಂಡು ಬಂದ ನಾಯಿ: ಟ್ರ್ಯಾಕ್ಟರ್ ಕೆಳಗೆ ಬಿದ್ದು ಬಾಲಕ ಸಾವು - Mahanayaka
12:50 AM Monday 15 - December 2025

ಅಟ್ಟಾಡಿಸಿಕೊಂಡು ಬಂದ ನಾಯಿ: ಟ್ರ್ಯಾಕ್ಟರ್ ಕೆಳಗೆ ಬಿದ್ದು ಬಾಲಕ ಸಾವು

21/06/2023

ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿದ್ದರಿಂದ ಬಾಲಕನೊಬ್ಬ ಹೆದರಿ ಓಡಿ ಹೋಗುವ ವೇಳೆ ಟ್ರ್ಯಾಕ್ಟರ್ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಹನುಮಕೊಂಡ ಜಿಲ್ಲೆಯಲ್ಲಿ ಈ ದಾರುಣ ಘಟನೆ ನಡೆದಿದೆ.

ಹನುಮಕೊಂಡ ಜಿಲ್ಲೆಯ ಕಮಲಾಪುರ ಮಂಡಲದ ಮರ್ರಿಪಲ್ಲಿಗುಡ್ಡೆ ನಿವಾಸಿಗಳಾದ ಜಯಪಾಲ್ ಮತ್ತು ಸ್ವಪ್ನಾ ದಂಪತಿಯ ಏಕೈಕ ಮಗು ಧನುಷ್ (10). ಸ್ಥಳೀಯ ಸರಕಾರಿ ಪ್ರೌಢಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ. ತೆಲಂಗಾಣ ದಶಾಬ್ದಿ ಆಚರಣೆ ಅಂಗವಾಗಿ ನಡೆದ ರ‍್ಯಾಲಿಯಲ್ಲಿ ಧನುಷ್ ಭಾಗವಹಿಸಬೇಕಿತ್ತು.

ಈ ರ‍್ಯಾಲಿಯಲ್ಲಿ ಭಾಗವಹಿಸಲು ಹೋಗುವಾಗ ಬೀದಿ ನಾಯಿಗಳು ಹಿಂಬಾಲಿಸಿವೆ. ಅವುಗಳಿಂದ ತಪ್ಪಿಸಿಕೊಳ್ಳಲು ಬಾಲಕ ನಡು ರಸ್ತೆಯಲ್ಲಿ ಓಡಿದ್ದಾನೆ. ಅದೇ ವೇಳೆ, ಅದೇ ಗ್ರಾಮದ ರಿಕ್ಕಲ ನಾರಾಯಣ ರೆಡ್ಡಿ ಎಂಬುವವರ ಟ್ರ್ಯಾಕ್ಟರ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಟ್ರ್ಯಾಕ್ಟರ್ ಚಾಲಕ ತೋಟ ವಿಜಯೇಂದರ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಪಘಾತದಲ್ಲಿ ಟ್ರ್ಯಾಕ್ಟರ್ ಕೆಳಗೆ ಸಿಲುಕಿಬಿದ್ದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದಾನೆ. ತಮ್ಮ ಏಕೈಕ ಪುತ್ರನ ಅಕಾಲಿಕ ಮರಣಕ್ಕೆ ಧನುಷ್ ಪೋಷಕರು ರೋದಿಸಿದ್ದಾರೆ.

ಧನುಷ್ ತಂದೆ ಜಯಪಾಲ್ ಅವರು ಟ್ರ್ಯಾಕ್ಟರ್ ಮಾಲೀಕ ನಾರಾಯಣ ರೆಡ್ಡಿ ಮತ್ತು ಚಾಲಕ ತೋಟ ವಿಜಯೇಂದರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ