ವಿಧಾನ ಪರಿಷತ್ ನಲ್ಲಿ ಡಿ.ಕೆ.ಶಿವಕುಮಾರ್ ಗಡ್ಡದ ವಿಚಾರದಲ್ಲಿ ನಡೆಯಿತು ಹಾಸ್ಯಭರಿತ ಚರ್ಚೆ!

ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಡ್ಡದ ವಿಚಾರದಲ್ಲಿ ಹಾಸ್ಯ ಭರಿತ ಚರ್ಚೆಯೊಂದು ನಡೆಯಿತು.
ಗ್ಯಾರೆಂಟಿ ವಿಚಾರದಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಏಕಾಏಕಿ ಡಿ.ಕೆ.ಶಿವಕುಮಾರ್ ಅವರ ಗಡ್ಡದ ವಿಚಾರಕ್ಕೆ ತಿರುಗಿಸಿದರು.
ಈಗ ಎಲ್ಲರ ಕುತೂಹಲ ಇರೋದು ಡಿ.ಕೆ.ಶಿವಕುಮಾರ್ ಅವರು ಗಡ್ಡ ಯಾಕೆ ಬಿಟ್ಟರು ಅಂತ, ಯಾವಾಗ ಗಡ್ಡ ತೆಗೆಯುತ್ತಾರೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಪ್ರಶ್ನಿಸಿದರು.
ಕೋಟಾ ಶ್ರೀನಿವಾಸ್ ಪೂಜಾರಿ ಅವರ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಸುಮ್ಮನೆ ನಕ್ಕು ಕುಳಿತುಕೊಂಡಿದ್ದರು. ಈ ವೇಳೆ ಪ್ರಶ್ನೆ ಮುಂದುವರಿಸಿದ ಕೋಟಾ ಶ್ರೀನಿವಾಸ್, ಡಿ.ಕೆ.ಶಿವಕುಮಾರ್ ಯಾವಾಗ ಗಡ್ಡ ತೆಗೆಯುತ್ತಾರೆ ಎಂದು ಮತ್ತೆ ಪ್ರಶ್ನಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಸಚೇತಕ ರವಿಕುಮಾರ್, ಡಿಕೆಶಿ ಸಿಎಂ ಆಗಲು ಗಡ್ಡ ಬಿಟ್ಟಿದ್ದಾರೆ. ಸಿಎಂ ಆದ ನಂತರ ತೆಗೆಯುತ್ತಾರೆ. ಆದರೆ ಯಾವಾಗ ಸಿಎಂ ಆಗ್ತಾರೆ ಅನ್ನೋದೇ ಅವರಿಗೆ ಚಿಂತೆ ಎಂದು ವ್ಯಂಗ್ಯವಾಡಿದರು.
ರವಿಕುಮಾರ್ ಮಾತಿಗೆ ತಿರುಗೇಟು ನೀಡಿದ ಉಮಾಶ್ರೀ, ಡಿ.ಕೆ.ಶಿವಕುಮಾರ್ ರಾಜ್ಯ ಸುತ್ತಿ ಸಮಯ ಇಲ್ಲದೇ ಇರೋದಕ್ಕೆ ಗಡ್ಡ ತೆಗೆಯಲು ಆಗಿಲ್ಲ, ನಿಮಗ್ಯಾಕೆ ಅವರ ಗಡ್ಡದ ಮೇಲೆ ಕುತೂಹಲ ಎಂದು ಪ್ರಶ್ನಿಸಿದರಲ್ಲದೇ, ಮೋದಿ ಗಡ್ಡ ಬಿಟ್ಟಿದ್ದಾರೆ. ಅದು ಯಾಕೆ ಅಂತ ಮೊದಲು ಕೇಳಿ ಎಂದರು.
ಇದೇ ವೇಳೆ ಗಡ್ಡದ ವಿಚಾರ ಉದ್ದವಾಗುತ್ತಿರುವುದನ್ನು ಕಂಡು ಸಭಾಪತಿಗಳು ಕೂಡ ನಕ್ಕು, ನಿನಗ್ಯಾಕಮ್ಮ ಗಡ್ಡದ ವಿಷಯ ಎಂದು ಪ್ರಶ್ನಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth