ಅಮೆಜಾನ್ ಪಾರ್ಸೆಲ್ ಬಾಕ್ಸ್ ತೆರೆದಾಗ ಹೊರ ಬಂದ ಜೀವಂತ ಹಾವು: ಬೆಚ್ಚಿಬಿದ್ದ ದಂಪತಿ - Mahanayaka

ಅಮೆಜಾನ್ ಪಾರ್ಸೆಲ್ ಬಾಕ್ಸ್ ತೆರೆದಾಗ ಹೊರ ಬಂದ ಜೀವಂತ ಹಾವು: ಬೆಚ್ಚಿಬಿದ್ದ ದಂಪತಿ

snek
19/06/2024


Provided by

ಬೆಂಗಳೂರು: ಅಮೆಜಾನ್ ನಲ್ಲಿ ಎಕ್ಸ್ ಬಾಕ್ಸ್ ಕಂಟ್ರೋಲರ್ ಆರ್ಡರ್  ಮಾಡಿದ್ದ ದಂಪತಿ ಪಾರ್ಸೆಲ್ ಬಾಕ್ಸ್ ತೆರೆದಾಗ ಬೆಚ್ಚಿಬಿದ್ದಿದ್ದಾರೆ. ಬಾಕ್ಸ್ ನಲ್ಲಿ ಜೀವಂಯ ನಾಗರ ಹಾವು ಪತ್ತೆಯಾಗಿದ್ದು, ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ.

ಎಕ್ಸ್ ಬಾಕ್ಸ್ ಕಂಟ್ರೋಲರ್ ಎನ್ನುವ ಪ್ರಾಡಕ್ಟ್ ಅನ್ನು ಬೆಂಗಳೂರಿನ ಸರ್ಜಾಪುರ ನಿವಾಸಿ ತಾನ್ವಿ ಎಂಬರು ಅಮೆಜಾನ್ ನಲ್ಲಿ ಆರ್ಡರ್ ಮಾಡಿದ್ದರು. ಕಳೆದ ಭಾನುವಾರ ಪ್ರಾಡಕ್ಟ್ ಡೆಲಿವರಿಯಾಗಿದೆ. ಆದರೆ ಬಾಕ್ಸ್ ಓಪನ್ ಮಾಡಿದ ವೇಳೆ ಜೀವಂತ ನಾಗರ ಹಾವು ಬಾಕ್ಸ್ ನಿಂದ ಹೊರ ಬಂದಿದ್ದು, ಮನೆ ಮಂದಿ ಬೆಚ್ಚಿಬಿದ್ದಿದ್ದಾರೆ.

ಬಾಕ್ಸ್ ನಿಂದ ಹಾವು ಹೊರ ಬರುವವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು. ಈ ವಿಡಿಯೋವನ್ನು ಅಮೆಜಾನ್ ಸಂಸ್ಥೆಗೆ ಎಕ್ಸ್ ಮೂಲಕ ಟ್ಯಾಗ್ ಮಾಡಿ ವಿಷಯ ತಿಳಿಸಿ ದೂರು ಕೊಟ್ಟಿದ್ದಾರೆ.

ಈ  ವಿಡಿಯೋ ನೋಡಿದ ಹಲವರು ಶಾಕ್ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಆನ್‌ ಲೈನ್ ಡಿಲಿವರಿ ವ್ಯವಸ್ಥೆ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವುದಾಗಿ ನಾಗರಿಕರು ಈ ವಿಡಿಯೋಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ