ಮನೆಗೆ ನುಗ್ಗಿ ಮಹಿಳೆಗೆ ಕಚ್ಚಿದ ಮಂಗ! - Mahanayaka

ಮನೆಗೆ ನುಗ್ಗಿ ಮಹಿಳೆಗೆ ಕಚ್ಚಿದ ಮಂಗ!

16/11/2025

ಚಿಕ್ಕಮಗಳೂರು:  ಕಾಫಿನಾಡಲ್ಲಿ ಮಂಗಗಳ ಹಾವಳಿಗೆ ಜನ ಬೆಚ್ಚಿಬಿದ್ದಿದ್ದಾರೆ. ಇದೀಗ ಮಂಗವೊಂದು ಮನೆಯೊಳಗೆ ನುಗ್ಗಿ ಮಹಿಳೆಯ ಮೇಲೆ ದಾಳಿ ನಡೆಸಿದ್ದು, ಮಹಿಳೆಗೆ ಕಚ್ಚಿ ಗಾಯಗೊಳಿಸಿದೆ.

ಮಂಗನ ದಾಳಿಯಿಂದಾಗಿ ಮಹಿಳೆಯ ಕೈ–ಮುಖದ ಭಾಗಕ್ಕೆ ಗಾಯವಾಗಿದೆ.  ಚಿಕ್ಕಮಗಳೂರು ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪೂಜಾ ಎಂಬವರು ಗಾಯಗೊಂಡ ಮಹಿಳೆಯಾಗಿದ್ದಾರೆ. ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಂಗ ಏಕಾಏಕಿ ದಾಳಿ ನಡೆಸಿದ್ದು, ಕೈ ಮತ್ತು ಮುಖಕ್ಕೆ  ಗಾಯಗೊಳಿಸಿದೆ.

ಮಂಗನ ದಾಳಿಯಿಂದ ಗಾಯಗೊಂಡ ಪೂಜಾ ಅವರನ್ನು ತಕ್ಷಣವೇ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.  ಮಂಗಗಳ ಹಾವಳಿಯಿಂದ ಶಾಂತವೇರಿ ಗ್ರಾಮಸ್ಥರು ಕಂಗಾಲಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ