2 ದಿನದ ಗಂಡು ಮಗುವನ್ನು ಕಾಫಿತೋಟದಲ್ಲಿ ಬಿಟ್ಟು ಹೋದ ಮಹಾತಾಯಿ! - Mahanayaka
2:18 AM Wednesday 15 - October 2025

2 ದಿನದ ಗಂಡು ಮಗುವನ್ನು ಕಾಫಿತೋಟದಲ್ಲಿ ಬಿಟ್ಟು ಹೋದ ಮಹಾತಾಯಿ!

chikkamagaluru
17/01/2025

ಚಿಕ್ಕಮಗಳೂರು : 2 ದಿನದ ಗಂಡು ಮಗುವನ್ನು  ತಾಯಿಯೊಬ್ಬಳು ತೋಟದಲ್ಲಿ ಬಿಟ್ಟು ಹೋದ ಘಟನೆ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ.


Provided by

ಕರುಳುಬಳ್ಳಿಯನ್ನ ಮೈಗೆ ಸುತ್ತಿಕೊಂಡು ಕಾಫಿತೋಟದ ಕಾಫಿಗಿಡದಡಿ ಹಸುಗೂಸು ಅಳುತ್ತಿತ್ತು. ಮಗುವಿನ ಅಳು ಕೇಳಿಸಿ, ತೋಟದ ಪಕ್ಕದ ಮನೆಯ ಚಂದ್ರಮ್ಮ ಎಂಬವರು ಮಗುವನ್ನು ರಕ್ಷಣೆ ಮಾಡಿದ್ದಾರೆ.

ಮಗುವನ್ನ ಮನೆಗೆ ತಂದು ಹಾಲು ಕುಡಿಸಿ ಸಂತೈಸಿದ ಚಂದ್ರಮ್ಮ, ಸ್ಥಳಕ್ಕೆ ವೈದ್ಯರು, ನರ್ಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳ ಭೇಟಿ ನೀಡಿದರು.

ಮಕ್ಕಳ ಕಲ್ಯಾಣ ಅಧಿಕಾರಿಗಳು  ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ. ಹಸುಗೂಸನ್ನ ತೋಟದಲ್ಲಿ ಬಿಟ್ಟು ಹೋದ ತಾಯಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ