ಬಾಡಿಗೆ ಮನೆಯಲ್ಲೇ ಸಾವಿಗೆ ಶರಣಾದ ಪೊಲೀಸ್ ಕಾನ್ ಸ್ಟೇಬಲ್!
15/09/2023
ಪೊಲೀಸ್ ಕಾನ್ ಸ್ಟೇಬಲ್ ಸಾವಿಗೆ ಶರಣಾಗಿರುವ ಘಟನೆ ಮಂಗಳೂರಲ್ಲಿ ನಡೆದಿದೆ. ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದ ಮಹೇಶ್(31) ಎಂಬವರು ಮೃತಪಟ್ಟವರು.
ಇವರು ಮೂಲತಃ ಗದಗ ಜಿಲ್ಲೆಯವರು. ಮಂಗಳೂರು ನಗರದ ಕಪಿತಾನಿಯೋದಲ್ಲಿ ಬಾಡಿಗೆ ಮನೆಯಲ್ಲಿ ಇನ್ನೋರ್ವ ಪೊಲೀಸ್ ಸಿಬ್ಬಂದಿಯೊಂದಿಗೆ ಮಹೇಶ್ ವಾಸವಾಗಿದ್ದರು ಎನ್ನಲಾಗಿದೆ. ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ.
ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಕುಟುಂಬ ಸದಸ್ಯರು ಆಗಮಿಸಿದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.




























