ಚುನಾವಣೆ ಹೊತ್ತಲ್ಲೇ ಜೆಡಿಎಸ್ ಗೆ ಆಘಾತ: ಮತ್ತೊಂದು ವಿಕೆಟ್ ಪತನ!
ಬೆಂಗಳೂರು: ಜೆಡಿಎಸ್ ನ ಇನ್ನೊಂದು ವಿಕೆಟ್ ಪತನವಾಗಿದೆ. ನಿರೀಕ್ಷೆಯಂತೆ ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಕಾರ್ಯದರ್ಶಿಗಳಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ರಾಜೀನಾಮೆ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಜೆಡಿಎಸ್ ಪಕ್ಷ ನಾನು ಬಿಡಲಿಲ್ಲ. ಅವರೇ ಹೊರೆಗೆ ಹಾಕಿದ್ರು. ನಾನು ಯಾವತ್ತು ಬಿಡ್ತೀನಿ ಅಂತ ಹೇಳಿಲ್ಲ. ಎಲ್ಲಾ ಪಕ್ಷದಲ್ಲಿ ಲೋಪದೋಷ ಇರುತ್ತವೆ. ನಾನು ಬಲಿಪಶುವಾದೆ. ಹಣದ ಮುಂದೆ ಬಲಿಪಶು ಆಗಿದ್ದೇನೆ. ಅಕ್ರಮವನ್ನು ಎತ್ತಿ ಹಿಡಿದಿದ್ದೇ ನನಗೆ ಮಾರಕವಾಗಿದೆ. ಅದನ್ನು ನಾನು ಸಂತೋಷವಾಗಿ ಸ್ವೀಕಾರ ಮಾಡುತ್ತೇನೆ ಅಂದರು.
ವೈಯಕ್ತಿಕ ಲಾಭಕ್ಕೆ ಕೆಲಸ ಮಾಡಿಲ್ಲ. ಜನತ ಹಿತಾಸಕ್ತಿ ಕಾಪಾಡಿದ ತೃಪ್ತಿ ನನಗೆ ಇದೆ. ತಪ್ಪನ್ನು ತಪ್ಪು, ಸರಿಯನ್ನು ಸರಿ ಅಂತ ಹೇಳಿದ್ದೇನೆ. ವಿರೋಧಗಳು ಕೂಡಾ ನನ್ನ ಭಾವನೆಗೆ ಸಹಕಾರ ಕೊಟ್ಟಿವೆ. ನನ್ನ ಇವತ್ತಿನ ವಿರೋಧಿಗಳು ಉತ್ತಮ ಆಶಯದೊಂದಿಗೆ ಒಳ್ಳೆಯದು ಮಾಡಲಿ ಎಂದರು.
ಮುಂದಿನ ದಿನಗಳಲ್ಲಿ ನನ್ನ ನಡೆ ಬಗ್ಗೆ ಹೇಳುತ್ತೇನೆ. ಅನೇಕ ಜನರು ನನ್ನನ್ನು ಸಂಪರ್ಕ ಮಾಡುತ್ತಿದ್ದಾರೆ. ಕಾಲಾಯ ತಸ್ಮೈ ನಮಃ. ಜನರಿಗಾಗಿ ಮತ್ತೆ ಚುನಾವಣೆಗೆ ನಿಲ್ಲಬೇಕು ಎಂಬ ಅಪೇಕ್ಷೆ ಇದೆ. ಅವಕಾಶ ಸಿಕ್ಕರೆ ನಿಲ್ಲುತ್ತೇನೆ. ಕಾಂಗ್ರೆಸ್ ಸೇರ್ಪಡೆ ಆಗೋ ಚರ್ಚೆ ಆಗಿದೆ. ಆದರೆ ಇನ್ನೂ ನಿರ್ಧಾರ ಆಗಿಲ್ಲ. ಆದಷ್ಟು ಬೇಗ ಮುಂದಿನ ತೀರ್ಮಾನ ತಿಳಿಸುತ್ತೇನೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























