ತಾಯಿಯನ್ನೇ ಕೊಂದ ಪಾಪಿ ಮಗಳು!
ಚಿಕ್ಕಮಗಳೂರು: ಮಗಳೊಬ್ಬಳು ಆಸ್ತಿಗಾಗಿ ತನ್ನ ತಾಯಿಯನ್ನೇ ಕೊಂದ ಅಮಾನವೀಯ ಘಟನೆ ಎನ್.ಆರ್.ಪುರ ತಾಲೂಕಿನ ಬಂಡಿಮಠ ಗ್ರಾಮದಲ್ಲಿ ನಡೆದಿದೆ.
ಕುಸುಮಾ (62) ಮಗಳಿಂದಲೇ ಕೊಲೆಯಾದ ನತದೃಷ್ಟ ತಾಯಿ. ಸುಧಾ (35) ಆಸ್ತಿಗಾಗಿ ಅಮ್ಮನ ಕೊಂದ ಮಗಳಾಗಿದ್ದಾಳೆ. ಒಂದೂವರೆ ಎಕರೆ ಜಮೀನು ಕೈತಪ್ಪುತ್ತದೆ ಎನ್ನುವ ಕಾರಣಕ್ಕೆ ತಾಯಿಯನ್ನೇ ಮಗಳು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ.
ಕೂಲಿಗಾಗಿ ಬೇರೆ ಊರಿನಿಂದ ಬಂದಿದ್ದ ಈ ಕುಟುಂಬ ಎನ್.ಆರ್.ಪುರ ತಾಲೂಕಿನ ಬಂಡಿಮಠ ಗ್ರಾಮದಲ್ಲಿ ನೆಲೆಸಿತ್ತು. ತಮ್ಮ ಊರಿನಲ್ಲಿರುವ ಆಸ್ತಿ ತನ್ನ ಕೈತಪ್ಪುತ್ತದೆ ಎನ್ನುವ ಕಾರಣಕ್ಕಾಗಿ ಮಗಳು ರಾತ್ರಿ ತನ್ನ ತಾಯಿ ಮಲಗಿದ್ದ ವೇಳೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ.
ಘಟನೆ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























