ಗಣಪತಿ ತೋರಿಸುವುದಾಗಿ ಕರೆದೊಯ್ದ ಪಾಪಿ ತಂದೆಯಿಂದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ! - Mahanayaka
1:51 AM Saturday 18 - October 2025

ಗಣಪತಿ ತೋರಿಸುವುದಾಗಿ ಕರೆದೊಯ್ದ ಪಾಪಿ ತಂದೆಯಿಂದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ!

stop rape
01/09/2025

ವಿಜಯಪುರ: ಗಣಪತಿ ತೋರಿಸುವುದಾಗಿ ಮಗಳನ್ನು ಕರೆದೊಯ್ದ ತಂದೆಯೊಬ್ಬ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ  ಬಾಲಕಿಯ ತಾಯಿ ದೂರು ನೀಡಿರುವ ಘಟನೆ ಇಂಡಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.


Provided by

ಶನಿವಾರ ರಾತ್ರಿ 8ರ ಸುಮಾರಿಗೆ ಓಣಿಯಲ್ಲಿನ ಗಣಪತಿ ನೋಡಿಕೊಂಡು ಬರಲು ಸಹೋದರಿಯ ಜೊತೆಗೆ ಹೋಗಿದ್ದ ಐದು ವರ್ಷದ ಹೆಣ್ಣು ಮಗುವಿನ ಮೇಲೆ ತಂದ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆ ಮಗುವಿನ ತಾಯಿಯೇ ದೂರು ದಾಖಲಿಸಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುವ ಮಗಳು ಮತ್ತು ಆಕೆಯ ತಾಯಿ ಕೌಟುಂಬಿಕ ಕಲಹದಿಂದಾಗಿ ತಂದೆಯಿಂದಲೇ ದೂರವಿದ್ದರು. ಇದೀಗ ಗಣಪತಿ ನೋಡಲೆಂದು ಹೋದಾಗ ಗಣಪತಿ ತೋರಿಸುವುದಾಗಿ ಕರೆದೊಯ್ದ ತಂದೆ ನಿರ್ಜನ ಪುದೇಶದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಯಾತನೆಯಿಂದ ಕಂಗಾಲಾದ ಮಗು ಮನೆಗೆ ಬಂದು ತಾಯಿಗೆ ತಿಳಿಸಿದ್ದಾಳೆ.

ತಕ್ಷಣವೇ ತಾಯಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಿಸಿದ್ದಾರೆ. ಸದ್ಯ ಘಟನೆ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳುವುದಾಗಿ ತಿಳಿಸಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ