ಗಂಡ ಸಾಲ ತೀರಿಸಲಿಲ್ಲ ಎಂದು ಪತ್ನಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಪಾಪಿ! - Mahanayaka
12:21 AM Saturday 18 - October 2025

ಗಂಡ ಸಾಲ ತೀರಿಸಲಿಲ್ಲ ಎಂದು ಪತ್ನಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಪಾಪಿ!

chitturu
17/06/2025

ಚಿತ್ತೂರು: ಪತಿ ಮಾಡಿದ ಸಾಲ ತೀರಿಸಲಿಲ್ಲವೆಂದು ಮಹಿಳೆಯೊಬ್ಬರನ್ನ ಮರಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.


Provided by

ಸಿರಿಶಾ ಎಂಬ ಮಹಿಳೆ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಮುನಿಕಣ್ಣಪ್ಪ ಎಂಬಾತ ಈ ದುಷ್ಕೃತ್ಯ  ಎಸಗಿದ ಆರೋಪಿಯಾಗಿದ್ದಾನೆ.

3 ವರ್ಷಗಳ ಹಿಂದೆ ಸಿರಿಶಾ ಪತಿ ಮುನಿಕಣ್ಣಪ್ಪನಿಂದ 80 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದನು. ಸಾಲ ತೀರಿಸಲು ಸಾಧ್ಯವಾಗದ ಹಿನ್ನೆಲೆ ದಂಪತಿ ತಮ್ಮ ಮಕ್ಕಳೊಂದಿಗೆ ಕುಪ್ಪಂ ಮಂಡಲದ ನಾರಾಯಣಪುರಂ ಗ್ರಾಮವನ್ನು ತೊರೆದಿದ್ದರು. ಅಲ್ಲದೇ ಸಾಲ ಪಾವತಿಸಲು ಹಾಗೂ  ಕುಟುಂಬವನ್ನು ಪೋಷಿಸಲು ಸಿರಿಶಾ ದಿನಗೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು.

ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ತನ್ನ ಮಗುವಿನ ಪರೀಕ್ಷಾ ಪ್ರಮಾಣ ಪತ್ರಗಳನ್ನು ಪಡೆಯಲು ಗ್ರಾಮಕ್ಕೆ ಹಿಂತಿರುಗಿದ್ದ ಸಿರಿಶಾಳನ್ನು ತಡೆದ ಮುನಿಕಣ್ಣಪ್ಪ,  ಬೇವಿನ ಮರಕ್ಕೆ ಎಳೆದು ತಂದು, ಹಗ್ಗಗಳಿಂದ ಕಟ್ಟಿ, ಥಳಿಸಿದ್ದಾನೆ. ಸಾಲ ಪಾವತಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ತಡೆಯಲು ಬಂದ ಸಾರ್ವಜನಿಕರ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ.

ಸದ್ಯ ಆರೋಪಿಯನ್ನು ಕುಪ್ಪಂ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಖಂಡಿಸಿದ್ದು, ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ