ತಲೆನೋವು, ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿ ಸಾವು - Mahanayaka
8:25 AM Wednesday 3 - September 2025

ತಲೆನೋವು, ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿ ಸಾವು

ashwith
30/12/2022


Provided by

ತಲೆನೋವು, ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿರೋ ಘಟನೆ ಮಂಗಳೂರಲ್ಲಿ ನಡೆದಿದೆ. ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅಶ್ವಿತ್ ಮೃತಪಟ್ಟ ಬಾಲಕ.

ಎರಡು ವರ್ಷಗಳ ಹಿಂದೆ ಅಶ್ವಿತ್ ನ ತಂದೆ ಅವಘಡವೊಂದರಲ್ಲಿ ಸಾವನ್ನಪ್ಪಿದ್ದರು. ಕೊಲ್ಯ ಸಾರಸ್ವತ ಕಾಲನಿಯ ಮನೆಯಲ್ಲಿ ಅಶ್ವಿತ್ ತಾಯಿಯೊಂದಿಗೆ ವಾಸವಿದ್ದ. ಅಶ್ವಿತ್ ಶಾಲೆಯಲ್ಲೂ ಪ್ರತಿಭಾನ್ವಿತನಾಗಿದ್ದು ಶಿಕ್ಷಕರ ಪ್ರೀತಿ ಪಾತ್ರನಾಗಿದ್ದ.

ಕಳೆದ ಎರಡು ದಿನಗಳಿಂದ ಜ್ವರ, ತಲೆನೋವು ಎನ್ನುತ್ತಿದ್ದ ಅಶ್ವಿತ್ ಶಾಲಾ ವಾರ್ಷಿಕೋತ್ಸವದ ಸ್ಕಿಟ್ ನಲ್ಲೂ ಭಾಗವಹಿಸಲು ತಯಾರಿ ನಡೆಸಿದ್ದ. ವಿದ್ಯಾರ್ಥಿಯ ಅಕಾಲಿಕ ಮರಣದಿಂದ ಶಾಲಾ ಆಡಳಿತ ಮಂಡಳಿ, ಕುಟುಂಬ ಹಾಗೂ ಸ್ಥಳೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ