ಕೊರಗಜ್ಜನಿಗೆ ಕೈಮುಗಿದು ಕಾಣಿಕೆ ಹುಂಡಿ ಕದ್ದ ಕಳ್ಳ! - Mahanayaka

ಕೊರಗಜ್ಜನಿಗೆ ಕೈಮುಗಿದು ಕಾಣಿಕೆ ಹುಂಡಿ ಕದ್ದ ಕಳ್ಳ!

koragajja
30/04/2025


Provided by

ಮಂಗಳೂರು: ವ್ಯಕ್ತಿಯೊಬ್ಬ ಕೊರಗಜ್ಜನಿಗೆ ವಿನಮ್ರತೆಯಿಂದ ಕೈಮುಗಿದು ಕಾಣಿಕೆ ಹುಂಡಿಯನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕರಾವಳಿಯ ಕಾರಣಿಕ ದೈವ ಕೊರಗಜ್ಜನ ಗುಡಿಯಿಂದ ಕಳ್ಳ ಹುಂಡಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೊರಗಜ್ಜನ ಗುಡಿಗೆ ಕೈ ಮುಗಿಯುತ್ತಾ, ಪ್ರದಕ್ಷಿಣೆ ಹಾಕಿದ ಕಳ್ಳ, ನಂತರ ಸುತ್ತಮುತ್ತ ಯಾರೂ ಇಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡು ಹುಂಡಿಯನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾನೆ.

ಮಂಗಳೂರು ನಗರದ ಮೇರಿಹಿಲ್‍ನ ಕೊರಗಜ್ಜನ ಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ