ಅರೆ ಬೆತ್ತಲಾಗಿ ಏಕಾಏಕಿ ಕಾರಿನ ಮೇಲೆ ಹಾರಿದ ಯುವಕ

ಬೆಂಗಳೂರು: ವ್ಯಕ್ತಿಯೊಬ್ಬ ಕಾರಿನ ಬೋನೆಟ್ ಮೇಲೆ ಏಕಾಏಕಿ ಹಾರಿ ಅಸಭ್ಯ ವರ್ತನೆ ತೋರಿದ ಘಟನೆ ಬೆಂಗಳೂರಿನ ನೋವೋಟೆಲ್ ಹೋಟೆಲ್ ಬಳಿಯ ಔಟರ್ ರಿಂಗ್ ರೋಡ್ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅರೆಬೆತ್ತಲೆ ಅವಸ್ಥೆಯಲ್ಲಿದ್ದ ಯುವಕ ಹಠಾತ್ತನೆ ಕಾರಿನ ಮೇಲೆ ಹಾರಿದ್ದಾನೆ. ಈ ವೇಳೆ ಆತಂಕ್ಕೊಳಗಾದ ಕಾರು ಚಾಲಕ ಕಾರು ಮುಂದೆ ಚಲಾಯಿಸಲು ಮುಂದಾದ ವೇಳೆ ಕಿರುಚಾಡಿ ಅಸಭ್ಯ ವರ್ತನೆ ತೋರಿದ್ದಾನೆ.
ಬಳಿಕ ಕಾರನ್ನು ಅಟ್ಟಾಡಿಸಿಕೊಂಡು ಕಾರನ್ನು ಏರಲು ಮುಂದಾಗಿದ್ದಾನೆ. ಆತನ ವರ್ತನೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಇಂತಹ ವರ್ತನೆ ಸರಿಯೇ ಎನ್ನುವ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಈ ಯುವಕನಿಗೇನಾಗಿದೆ, ಪ್ರಚಾರದ ಹುಚ್ಚೋ, ಅಥವಾ ಮಾದಕ ವಸ್ತುಗಳ ಮತ್ತೋ ಅಂತ ಜನ ಸಂಶಯ ವ್ಯಕ್ತಪಡಿಸಿದ್ದಾರೆ.
ORR, Near Novotel ⚠️
Whats with him?@DriveSmart_IN @dabir @RCBengaluru @InfraEye @uneaz @anil_lulla
pic.twitter.com/mdgTlu99JR— Dave (Road Safety: City & Highways) (@motordave2) September 24, 2025
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD