ಬದುಕಿಗೆ ವಿದಾಯ ಹೇಳಿದ ಆನ್ ಲೈನ್ ಗೇಮ್ ನಲ್ಲಿ 18 ಲಕ್ಷ ಕಳೆದುಕೊಂಡ ಯುವಕ!

ದಾವಣಗೆರೆ : ಆನ್ ಲೈನ್ ಗೇಮ್ ನಲ್ಲಿ ಆಟವಾಡಿ 18 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸರಸ್ವತಿ ನಗರದಲ್ಲಿ ನಡೆದಿದೆ.
ಶಶಿ ಕುಮಾರ್ (25) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಈತ ಆನ್ ಲೈನ್ ಗೇಮ್ ನಿಷೇಧ ಮಾಡುವಂತೆ ಪ್ರಧಾನಿ, ಮುಖ್ಯಮಂತ್ರಿ ಸಂಸದೆ, ಡಿಸಿ, ಎಸ್ ಪಿ ಸೇರಿ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದ. ಯಾವುದೇ ಕ್ರಮವಾಗದ ಹಿನ್ನೆಲೆ ನೊಂದು ಈ ನಿರ್ಧಾರ ಕೈಗೊಂಡಿದ್ದಾನೆ.
ಸಾವಿಗೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ಆನ್ ಲೈನ್ ಗೇಮ್ ನ ಅಕ್ರಮಗಳ ಬಗ್ಗೆ ಯುವಕ ವಿವರಿಸಿದ್ದಾನೆ. ನನ್ನಂತೆಯೇ ಹಣ ಕಳೆದುಕೊಂಡು ನೋವು ಅನುಭವಿಸುವ ಘಟನೆಗಳು ಕಡಿಮೆಯಾಗಲಿ ಎಂದು ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾನೆ. ಕೆಟಿಜೆ ನಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD