ಆಮ್ ಆದ್ಮಿ ಪಕ್ಷವು ರಾಷ್ಟ್ರ ಪಕ್ಷ ಆಗಲಿದೆ: ಜಿಲ್ಲಾಧ್ಯಕ್ಷ ಶರಣಯ್ಯ ವಿಶ್ವಾಸ
ಗಂಗಾವತಿ: ಆಮ್ ಆದ್ಮಿ ಪಕ್ಷವು ರಾಷ್ಟ್ರ ಪಕ್ಷ ಆಗಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಶರಣಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013 ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧೆ ಮಾಡಿ ಇಡೀ ದೇಶವೇ ಬೆರಗಾಗುವಂತೆ ಮತ್ತು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ 28 ಕ್ಷೇತ್ರಗಳಲ್ಲಿ ಗೆದ್ದೆವು. 49 ದಿನಗಳ ಆಡಳಿತದಲ್ಲಿ ನಾವು ನೀಡಿದ ಜನಪರ ಯೋಜನೆಗಳಾದ ಉಚಿತ ವಿದ್ಯುತ್ ಮತ್ತು ನೀರು ಯೋಜನೆಯ ಅತ್ಯಂತ ಜನಪ್ರಿಯವಾಯಿತು. ನಂತರ 2015ರಲ್ಲಿ ದೆಹಲಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 70 ರಲ್ಲಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜಕೀಯ ಇತಿಹಾಸವನ್ನೇ ಸೃಷ್ಟಿ ಮಾಡಿತು. ಅಧಿಕಾರಕ್ಕೆ ಬಂದ ಮೇಲೆ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಮಾಡಿದ ಕೆಲಸಗಳನ್ನು ಎಲ್ಲಾ ಸರ್ಕಾರಗಳಿಗೆ ಮಾದರಿಯಾಗಿದೆ ಎಂದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷವು ಮಾಡಿದಂತಹ ಬದಲಾವಣೆ ಎಲ್ಲರೂ ಸಹ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಮಾಡಿತು. ಸರ್ಕಾರ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಏನೆಲ್ಲಾ ಬದಲಾವಣೆಗಳು ಸಾಧ್ಯ ಎಂಬುದನ್ನು ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ದೆಹಲಿಯ ಆಫ್ ಸರ್ಕಾರ ಮಾಡಿ ತೋರಿಸಿದೆ ಎಂದು ಅವರು ಹೇಳಿದರು.
ದೆಹಲಿ ಮಾದರಿಯನ್ನೆ ನಾವು ಮುಂದಿಟ್ಟುಕೊಂಡು ಪ್ರತಿ ರಾಜ್ಯದಲ್ಲಿ ನಾವು ಚುನಾವಣೆಯನ್ನು ಪ್ರವೇಶಿಸುತ್ತೇವೆ ಆದರೆ ಅದರ ಫಲಿತಾಂಶ 2022ರ ಪಂಜಾಬ್ ಚುನಾವಣೆ ಗೋವಾದಲ್ಲಿಯೂ ಕೂಡ ನಾವು ಇಬ್ಬರು ಶಾಸಕರು ಮತ್ತು 6.8 ಮತಗಳನ್ನು ಪಡೆಯುವ ಮೂಲಕ ರಾಜ್ಯಪಕ್ಷದ ಸ್ಥಾನಮಾನವನ್ನು ಪಡೆದಿದ್ದೇವೆ ದೆಹಲಿಯಲ್ಲಿ 15 ವರ್ಷಗಳಿಂದ ಎಂ ಸಿ ಡಿ ಯಲ್ಲಿ ಆಡಳಿತದಲ್ಲಿ ಇದ್ದ ಬಿಜೆಪಿಯನ್ನು ಅಧಿಕಾರದಿಂದ ಉಳಿಸಿ ಇಂದು ಆಮ್ ಆದ್ಮಿ ಗೆ ದೆಹಲಿಯ ಜನ ಆಶೀರ್ವಾದ ಮಾಡಿ ಅಧಿಕಾರಿ ನೀಡಿದ್ದಾರೆ ಎಂದರು.
ಮೊನ್ನೆ ತಾನೆ ನಡೆದ ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವೂ ಅಭೂತಪೂರ್ವ ಯಶಸ್ಸನ್ನು ಕಂಡಿದೆ ಗುಜರಾತ್ ನಲ್ಲಿ ಐದು ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಶೇಕಡ 13 ಪ್ರತಿಶತ ಮತಗಳನ್ನು ಪಡೆದು ರಾಜ್ಯ ಪಕ್ಷವಾಗಿ ಹೊರಹೊಮ್ಮಿದೆ ಮತ್ತು 41 ಲಕ್ಷಕ್ಕೂ ಅಧಿಕ ಮತದಾರರು ಆಮ್ ಆದ್ಮಿಗೆ ಮತ ಚಲಾಯಿಸಿ ನಮ್ಮನ್ನು ಬೆಂಬಲಿಸಿದ್ದಾರೆ ಎಂದರು.
ಆಮ್ ಆದ್ಮಿ ಪಕ್ಷವು ಈಗ ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಿಕೊಂಡಿದ್ದು ಹಾಗಾಗಿ ರಾಷ್ಟ್ರೀಯ ಪಕ್ಷ ಸ್ಥಾನಮಾನವನ್ನು ಗಿಟ್ಟಿಸಿಕೊಂಡಿದೆ. ಕೇವಲ ಹತ್ತು ವರ್ಷಗಳಲ್ಲಿ ಎರಡು ರಾಜ್ಯಗಳಲ್ಲಿ ಅಧಿಕಾರವನ್ನು ಹೊಂದಿ ಆಡಳಿತ ಮುನ್ನಡೆಸುತ್ತಿದೆ ಎಂದರು.
ಇಂದು ಆಮ್ ಆದ್ಮಿ ಪಕ್ಷವು ಇಡೀ ದೇಶಕ್ಕೆ ರಾಜಕೀಯ ಪರ್ಯಾಯವಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಏಕಕಾಲದಲ್ಲಿ ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಎಲ್ಲಾ ಚುನಾವಣೆಗಳಿಂದ ಸಾಬೀತು ಮಾಡುತ್ತಾ ಬಂದಿದೆ ಮತ್ತು ಆಮ್ ಆದ್ಮಿ ಪಕ್ಷವು ಜನಸಾಮಾನ್ಯ ಪಕ್ಷವಾಗಿದ್ದು ಇಲ್ಲಿ ಕಾರ್ಯಕರ್ತರನ್ನು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷವು ಇಡೀ ದೇಶಕ್ಕೆ ಮಾದರಿಯಾಗಿ ಹೊರ ಹೊಮ್ಮಲಿದೆ ಮತ್ತು ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷ ವಾಗುವುದು ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ನಾಗರಿಕರಿಗೆ ಮತ್ತು ಪ್ರಾಮಾಣಿಕ ಕಾರ್ಯಕರ್ತರಿಗೆ ಮತ್ತು ದೇಶದ ಜನತೆಗೆ ಈ ಮೂಲಕ ಆಮ್ ಆದ್ಮಿ ಪಕ್ಷದಿಂದ ಅಭಿನಂದನೆಗಳು ಸಲ್ಲಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಹುಸೇನ್ ಸಾಬ್, ಗಂಗನಾಳ, ಶರಣಪ್ಪ ಸಜ್ಜೆಹೊಲ, ತಾಲೂಕು ಅಧ್ಯಕ್ಷರು ಮತ್ತು ರೇಣುಕಾ ಬಸವರಾಜ ಪರಸುರಾಮ ಇತರರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka




























