ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ: ತಂದೆ ಮಗಳಿಗೆ ತೀವ್ರ ಗಾಯ - Mahanayaka

ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ: ತಂದೆ ಮಗಳಿಗೆ ತೀವ್ರ ಗಾಯ

accident
15/07/2023


Provided by

ಮಣಿಪಾಲ: ಇಲ್ಲಿನ ಟೈಗರ್ ಸರ್ಕಲ್ ಬಳಿ ಇಂದು ಸಂಜೆ ವೇಳೆ ಬಸ್ ಮತ್ತು ಸ್ಕೂಟಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ತಂದೆ ಮಗಳು ಗಾಯಗೊಂಡ ಬಗ್ಗೆ ವರದಿಯಾಗಿದೆ.

ಗಾಯಗೊಂಡವರನ್ನು ಅಂಜಾರು ಗ್ರಾಮದ ಕಾಜರುಗುತ್ತು ನಿವಾಸಿ ರಮೇಶ್ ಜಿ.ಪ್ರಭು(69) ಹಾಗೂ ಅವರ ಮಗಳು ಮಾಹೆ ಉದ್ಯೋಗಿ ಶ್ರೀದೇವಿ ಪ್ರಭು (42) ಎಂದು ಗುರುತಿಸಲಾಗಿದೆ. ಕೆಎಂಸಿ ಕ್ವಾಟರ್ಸ್ ಕಡೆಯಿಂದ ಮಾರ್ಚರಿ ರಸ್ತೆಯಲ್ಲಿ ಟೈಗರ್ ಸರ್ಕಲ್ ಕಡೆಗೆ ಬರುತ್ತಿದ್ದ ಸ್ಕೂಟರ್‌ ಗೆ ಉಡುಪಿಯಿಂದ ಮಣಿಪಾಲ ಕಡೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ತಂದೆ ಮಗಳು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ