ಪಾರ್ವತಮ್ಮ ರಾಜ್ ಕುಮಾರ್ ಸೋದರಳಿಯನಿಗೆ ಅಪಘಾತ: ಗಂಭೀರ ಪೆಟ್ಟು

ಚಾಮರಾಜನಗರ: ಪಾರ್ವತಮ್ಮ ರಾಜ್ ಕುಮಾರ್ ಸೋದರಳಿಯ, ಎಸ್.ಎ.ಶ್ರೀನಿವಾಸ್ ಪುತ್ರ ಧೀರಜ್ ಕುಮಾರ್ ಅವರು ಅಪಘಾತಕ್ಕೀಡಾಗಿ ಕಾಲು ತುಂಡರಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕಹುಂಡಿ ಗೇಟ್ ಬಳಿ ಶನಿವಾರ ನಡೆದಿದೆ.
ಊಟಿಗೆ ಸೋಲೋ ಟ್ರಿಪ್ ತೆರಳಿದ್ದ ಧೀರಜ್ ಕುಮಾರ್ ಹಿಂತಿರುಗುವಾಗ ಟಿಪ್ಪರ್ ವೊಂದು ಡಿಕ್ಕಿಯಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾಲು ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ ಬಲಗಾಲನ್ನು ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿದ್ದು ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನಷ್ಟೇ ಈ ಸಂಬಂಧ ಪ್ರಕರಣ ದಾಖಲಾಗಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw