ಕಡವೆ ಬೇಟೆಯಾಡಿದ್ದ ಆರೋಪಿ ಬಂಧನ, ಇಬ್ಬರು ಪರಾರಿ - Mahanayaka
11:45 PM Thursday 21 - August 2025

ಕಡವೆ ಬೇಟೆಯಾಡಿದ್ದ ಆರೋಪಿ ಬಂಧನ, ಇಬ್ಬರು ಪರಾರಿ

hanuru news
17/06/2023


Provided by

ಹನೂರು: ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಕಡವೆ ಬೇಟೆಯಾಡಿದ್ದ  ಮಾರ್ಟಳ್ಳಿ ಸಮೀಪದ ಸಂದನಪಾಳ್ಯ ಗ್ರಾಮದ ಕೊಳಂದೈರಾಜ್ ಎಂಬುವವನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ರಾಮಾಪುರ ವನ್ಯಜೀವಿ ವಲಯದಲ್ಲಿ ಕಡವೆ ಬೇಟೆಯಾಡಿ ಅದರ ಮಾಂಸವನ್ನ ಪಾಲು ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ಅರಣ್ಯಾಧಿಕಾರಿಗಳನ್ನು ಕಂಡು ಸ್ಥಳದಲ್ಲಿದ್ದ ಜಾನ್ ಮತ್ತು ಕುಮಾರ್ ಎಂಬುವವರು ಪರಾರಿಯಾಗಿದ್ದು ಕೊಳಂದೈರಾಜ್ ಸಿಕ್ಕಿ ಬಿದ್ದಿದ್ದಾನೆ. ಕೂಡಲೇ ಆರೋಪಿ ಕೊಳಂದೈರಾಜ್, ಕಡವೆ ಮಾಂಸ ಹಾಗೂ ಅದನ್ನು ಬೇಟೆಯಾಡಲು ಬಳಸಿದ್ದ ಕೊಡಲಿ, ಮಚ್ಚು ಮುಂತಾದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಅರಣ್ಯಾಧಿಕಾರಿಗಳು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಿಂಕೆ ಮಾಂಸ:

hanuru news

ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ತಂತಿಯಲ್ಲಿ ನೇತು ಹಾಕಿದ್ದ 3 ಕೆ.ಜಿ.ಯಷ್ಟು ಜಿಂಕೆ ಮಾಂಸವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಂಪಯ್ಯಹಟ್ಟಿ ಗ್ರಾಮದವರಾದ ಸೋಮಣ್ಣ ಹಾಗೂ ನರಸಿಂಹ ಎಂಬುವವರು ತಲೆಮರೆಸಿಕೊಂಡಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಇವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಕಾರ್ಯಚರಣೆಯಲ್ಲಿ  ವಲಯ ಅರಣ್ಯಾಧಿಕಾರಿ ಸುಂದರ್, ಉಪ ವಲಯ ಅರಣ್ಯಾಧಿಕಾರಿ ಮಧುಕುಮಾರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ