ಮರ್ಯಾದಾ ಹತ್ಯೆ ಕುರಿತು ಸುಮೋಟೊ ಕೇಸ್ ದಾಖಲಿಸುವ ಬಗ್ಗೆ ಕ್ರಮ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಮರ್ಯಾದಾ ಹತ್ಯೆ ಕುರಿತು ಸುಮೋಟೊ ಕೇಸ್ ದಾಖಲು ಮಾಡುವ ಬಗ್ಗೆ ಗೃಹ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಕರಣದ ಕುರಿತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನು ಪ್ರಕಾರ ಯಾರಾದರೂ ದೂರು ಕೊಡಬೇಕು. ದೂರು ಕೊಡದೇ ಹೋದರೂ ಸುಮೋಟೊ ಕೇಸ್ ದಾಖಲು ಮಾಡಲು ಅವಕಾಶ ಇದೆ. ಸುಮೋಟೊ ಕೇಸ್ ಪೊಲೀಸರು ತೆಗೆದುಕೊಳ್ಳುತ್ತಾರೆ. ಕೆಲವು ಸಮಯದಲ್ಲಿ ಪೋಷಕರೇ ದೂರು ಕೊಡುತ್ತಾರೆ. ಆಗ ಕಾನೂನು ಪ್ರಕಾರ ಕ್ರಮ ಆಗಿ ಶಿಕ್ಷೆ ಆಗುತ್ತದೆ. ಈ ಕೇಸ್ನಲ್ಲಿ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಕೇಸ್ ನ ಪ್ರಾಮುಖ್ಯತೆ ನೋಡಿ ಪೊಲೀಸರೇ ಸುಮೋಟೊ ಕೇಸ್ ತೆಗೆದುಕೊಳ್ಳುವ ಪ್ರಕ್ರಿಯೆ ನಮ್ಮಲ್ಲಿ ಇದೆ. ಪ್ರಕರಣದ ಕುರಿತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನು ಪ್ರಕಾರ ಯಾರಾದರೂ ದೂರು ಕೊಡಬೇಕು ಎಂದರು.
ದೂರು ಕೊಡದೇ ಹೋದರೂ ಸುಮೋಟೊ ಕೇಸ್ ದಾಖಲು ಮಾಡಲು ಅವಕಾಶ ಇದೆ. ಸುಮೋಟೊ ಕೇಸ್ ಪೊಲೀಸರು ತೆಗೆದುಕೊಳ್ಳುತ್ತಾರೆ. ಕೇಸ್ನ ಪ್ರಾಮುಖ್ಯತೆ ನೋಡಿ ಪೊಲೀಸರೇ ಸುಮೋಟೊ ಕೇಸ್ ತೆಗೆದುಕೊಳ್ಳುವ ಪ್ರಕ್ರಿಯೆ ನಮ್ಮಲ್ಲಿ ಇದೆ ಎಂದು ಹೇಳಿದರು.