ನಟ ಚೇತನ್ ಅಹಿಂಸಾ ಬಿಡುಗಡೆ: ಅಭಿಮಾನಿಗಳಿಂದ ಸಂಭ್ರಮಾಚರಣೆ - Mahanayaka

ನಟ ಚೇತನ್ ಅಹಿಂಸಾ ಬಿಡುಗಡೆ: ಅಭಿಮಾನಿಗಳಿಂದ ಸಂಭ್ರಮಾಚರಣೆ

chethan
28/02/2022


Provided by

ಬೆಂಗಳೂರು: ನ್ಯಾಯಾಧೀಶರ ವಿರುದ್ಧ ಟ್ವೀಟ್ ಮಾಡಿದ ಆರೋಪದಲ್ಲಿ  ಬಂಧನವಾಗಿದ್ದ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಇಂದು ಬಿಡುಗಡೆಯಾಗಿದ್ದಾರೆ.

ಶುಕ್ರವಾರವೇ ಜಾಮೀನು ಮಂಜೂರಾಗಿದ್ದರೂ, ಆದೇಶ ಪ್ರತಿ ಲಭ್ಯವಾಗುವುದು ತಡವಾದ ಹಿನ್ನೆಲೆಯಲ್ಲಿ ಅವರು ಇಂದು ಸಂಜೆ ಬಿಡುಗಡೆಯಾಗಿದ್ದು,  ಒಂದು ವಾರದ ನ್ಯಾಯಾಂಗ ಬಂಧನದ ಬಳಿಕ ಅವರು ಇಂದು ಬಿಡುಗಡೆಯಾದರು.

ಚೇತನ್ ಅವರ ಬಿಡುಗಡೆಗೆ ವಕೀಲರಾದ ಬಾಲನ್, ಹರಿರಾಮ್ ಎ., ಕಾಶಿನಾಥ್ ಜೆ.ಡಿ., ರಮೇಶ್, ಪ್ರಸನ್ನ, ಸುನೀಲ್ ಕುಮಾರ್ ಗುನ್ನಾಪುರ ಮತ್ತು ಅವರ ತಂಡ ಸತತವಾಗಿ ಪ್ರಯತ್ನಿಸಿದ್ದು ಅಂತಿಮವಾಗಿ ಚೇತನ್ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಚೇತನ್ ಅವರ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳು, ಚಳುವಳಿ ಸ್ನೇಹಿತರು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.  ಚೇತನ್ ಬಿಡುಗಡೆಗೆ ಪತ್ನಿ ಮೇಘಾ ಎಸ್. ಸಂತಸ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ಸಾವು

ಮಣಿಪುರದಲ್ಲಿ ಇಂದು ಮೊದಲ ಹಂತದ ಮತದಾನ

ಗಾಂಜಾ ಮಾರಾಟ: ಆರೋಪಿ ಬಂಧನ

ರಷ್ಯಾ ವಿರುದ್ಧ ಉಕ್ರೇನ್‌ ಅಂತಾರಾಷ್ಟ್ರೀಯ ಕೋರ್ಟ್‌ ಮೊರೆ

ಇತ್ತೀಚಿನ ಸುದ್ದಿ