ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್: ಇತ್ತ ನಟ ವಿನಯ್ ಗೌಡಗೆ ಶಾಕ್! - Mahanayaka
5:58 AM Wednesday 20 - August 2025

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್: ಇತ್ತ ನಟ ವಿನಯ್ ಗೌಡಗೆ ಶಾಕ್!

vinay gowda
25/06/2024


Provided by

ಬಿಗ್ ಬಾಸ್ ಶೋ ಬಳಿಕ ಕನ್ನಡ ಚಿತ್ರರಂಗದಲ್ಲಿ ನಟ ವಿನಯ್ ಗೌಡ ದೊಡ್ಡ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.  ಸ್ಟಾರ್ ನಟರ ಚಿತ್ರದಲ್ಲಿ ವಿನಯ್ ಗೆ ವಿಲನ್ ಪಾತ್ರಗಳು ಒಂದರ ಹಿಂದೊಂದರಂತೆ ಬರುತ್ತಿದೆ. ಈ ನಡುವೆ ದರ್ಶನ್ ನಟನೆಯ ಡಿವಿಲ್ ಸಿನಿಮಾದಲ್ಲಿ ವಿಲನ್ ಆಗಿ ವಿನಯ್ ಗೌಡ ನಟಿಸಲಿದ್ದಾರಂತೆ. ಆದ್ರೆ ಸದ್ಯ ಕೊಲೆ ಆರೋಪದ ಮೇಲೆ ದರ್ಶನ್ ಜೈಲು ಸೇರಿರುವುದು ವಿನಯ್ ಗೌಡ ಅವರ ಚಿಂತೆಗೆ ಕಾರಣವಾಗಿದೆ.

ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿನಯ್,  ಮಿಲನ ಪ್ರಕಾಶ್ ಅವರ ನಿರ್ಮಾಣದ ಧಾರಾವಾಹಿಗಳಲ್ಲಿ ನಾನು ನಟಿಸಿದ್ದೇನೆ. ನನ್ನ ನಟನೆ ಏನು ಅಂತ ಅವರು ನೋಡಿದ್ದರು. ಒಂದಿನ ನನ್ನ ಕರೆಸಿ ಅವರು ರಗಡ್ ಆಗಿರುವ, ನೆಗೆಟಿವ್ ಶೇಡ್ ಪಾತ್ರ ಇದೆ, ಒಳ್ಳೆಯ ಸ್ಟಾರ್ ಮುಂದೆ ವಿಲನ್ ಅಂತ ಹೇಳಿದರು. ಆಮೇಲೆ ನನಗೆ ಅದು ಡೆವಿಲ್ ಅಂತ ಗೊತ್ತಾಯ್ತು. ನನ್ನ ಭಾಗದ 30% ಶೂಟಿಂಗ್ ಆಗಿದೆ, ಇನ್ನು ಡೈಲಾಗ್, ದರ್ಶನ್ ಜೊತೆಗಿನ ಒಂದಷ್ಟು ಶೂಟಿಂಗ್ ಬಾಕಿ ಇದೆ ಎಂದು ಹೇಳಿದ್ದಾರೆ.

ಲೇಟ್ ಆಗಿ ಬಂದರೂ ಕೂಡ ನಾನು ಚಿತ್ರರಂಗದ ಒಂದು ಭಾಗ. ಇಂದು ದರ್ಶನ್ ಅವರ ವಿಚಾರದಲ್ಲಿ ಮಾತನಾಡೋದು ತಪ್ಪು. ಇಂದು ಈ ಪ್ರಕರಣ ಕಾನೂನು ವ್ಯವಸ್ಥೆಯ ಅಡಿಯಲ್ಲಿದೆ. ಹೀಗಾಗಿ ನಾನು ಮಾತಾಡೋದು ಸರಿ ಇಲ್ಲ. ಎಲ್ಲವೂ ಖುಷಿ ಖುಷಿಯಾಗಿ ಮುಗಿಯಲಿ ಅಂತ ಬಯಸುವುದಾಗಿ ಅವರು ಹೇಳಿದರು.

ನನಗೆ ಡೆವಿಲ್ ಅನ್ನೋದು ಒಳ್ಳೆಯ ಪ್ರಾಜೆಕ್ಟ್ ಆಗಿತ್ತು. ಇದು ಕೈತಪ್ಪಿದರೆ ನಿಜಕ್ಕೂ ಬೇಸರ ಆಗತ್ತೆ, ಅದರಲ್ಲಿ ಸಂದೇಹ ಇಲ್ಲ ಎಂದು ವಿನಯ್ ಗೌಡ  ಹೇಳಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ