ಜೈಲರ್ ಸಿನಿಮಾದ ವಿಲನ್ ಪಾತ್ರ ಮಾಡಿದ್ದ ನಟ ಮಾರಿಮುತ್ತು ಹೃದಯಾಘಾತದಿಂದ ನಿಧನ | G.Marimuthu - Mahanayaka
11:46 PM Friday 19 - December 2025

ಜೈಲರ್ ಸಿನಿಮಾದ ವಿಲನ್ ಪಾತ್ರ ಮಾಡಿದ್ದ ನಟ ಮಾರಿಮುತ್ತು ಹೃದಯಾಘಾತದಿಂದ ನಿಧನ | G.Marimuthu

g marimuthu
08/09/2023

ತಮಿಳುನಾಡಿನ ಖ್ಯಾತ ನಟ, ಜೈಲರ್ ಸಿನಿಮಾದಲ್ಲಿ ವಿಲನ್ ನ ಸಹಚರನ ಪಾತ್ರ ಮಾಡಿದ್ದ ಮಾರಿಮುತ್ತು(58) ಹೃದಯಾಘಾತದಿಂದ ಅಕಾಲಿಕ ಸಾವಿಗೀಡಾಗಿದ್ದಾರೆ.

ಶುಕ್ರವಾರ ಬೆಳಗ್ಗೆ ಟಿವಿ ಶೋವೊಂದರ ಡಬ್ಬಿಂಗ್ ನಲ್ಲಿ ಮಾರಿಮುತ್ತು ಭಾಗಿಯಾಗಿದ್ದರು. ಚೆನ್ನೈನ ಸ್ಟುಡಿಯೋದಲ್ಲಿ ಈ ಡಬ್ಬಿಂಗ್ ನಡೆಯುತ್ತಿತ್ತು. ಡಬ್ ಮಾಡುತ್ತಿದ್ದ ವೇಳೆಯೇ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತಾದರೂ ಅವರು ಅದಾಗಲೇ ಮೃತಪಟ್ಟಿದ್ದರು.

ಜೈಲರ್ ಸಿನಿಮಾದಲ್ಲಿ ಪ್ರಮುಖ ವಿಲನ್ ಪಾತ್ರದೊಂದಿಗೆ ಮಾರಿ ಮುತ್ತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ನಟನೆಗೆ ಬಹಳಷ್ಟು ಪ್ರಶಂಸೆ ಸಿಕ್ಕಿತ್ತು. ಆದರೆ ಇದೀಗ ಅವರ ಅಕಾಲಿಕ ನಿಧನದಿಂದಾಗಿ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.

ಮಾರಿಮುತ್ತು ಅವರ ನಿಧನಕ್ಕೆ ಸೆಲೆಬ್ರೆಟಿಗಳು, ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇವಲ 58 ವರ್ಷದಲ್ಲೇ ಅವರು ಅಗಲಿರುವುದು, ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ.

ಇತ್ತೀಚಿನ ಸುದ್ದಿ