ಸಚಿವ ಉದಯನಿಧಿ ಸ್ಟಾಲಿನ್ ವಿರುದ್ದ ನಟ ಪ್ರಥಮ್ ಕಿಡಿ

ಚಾಮರಾಜನಗರ: ಸನಾತನ ಧರ್ಮದ ವಿರುದ್ಧ ಹೇಳಿಕೆ ಕೊಟ್ಟು ವಿವಾದ ಸೃಷ್ಟಿಸಿರುವ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ದ ಚಿತ್ರನಟ ಪ್ರಥಮ್ ಕಿಡಿಕಾರಿದ್ದಾರೆ.
ಹನೂರಿನಲ್ಲಿ ಅವರು ಮಾಧ್ಯಮವರೊಟ್ಟಿಗೆ ಮಾತನಾಡಿ, ಏನು ಹೇಳಿದ್ರು ಸರಿ ಅನ್ನೋ ಮನೋಭಾವ ಒಳ್ಳೆಯದಲ್ಲ, ತಪ್ಪು ತಿದ್ದುಕೊಳ್ಳಲು ಬಹಳಷ್ಟು ವೇದಿಕೆಗಳಿದ್ದರೂ ತಾನು ಮಾತನಾಡಿದ್ದೇ ಸರಿ ಎಂದು ಪೆಂಗನ ಥರ ಮಾತಾಡುವುದನ್ನು ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.
ಉಡಾಫೆ ಹೇಳಿಕೆಗಳಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುತ್ತೆ ಅನ್ನೋ ಪರಿಕಲ್ಪನೆ ಇರಬೇಕು, ಅವರ ಹೇಳಿಕೆಯಿಂದ ಎಷ್ಟೋ ಜನರ ಭಾವನೆಗಳಿಗೆ ನೋವಾಗಿದೆ,ಇಷ್ಟ ಇಲ್ಲದಿದ್ದರೆ ಧರ್ಮವನ್ನ ಪೂಜಿಸುವುದು ಬೇಡ, ಯಾರೇ ಆಗಲಿ ತಮ್ಮ ತಮ್ಮ ಧರ್ಮವನ್ನ ಗೌರವಿಸಬೇಕು, ಆದ್ರೆ ಈ ರೀತಿ ಮಾತಾಡೋದು ತಪ್ಪು, ಉದಯನಿಧಿ ತಪ್ಪಾಗಿ ಮಾತಾಡಿದ ಬಳಿಕ ಕ್ಷಮೆ ಕೇಳ್ತಾರೆ ಅನ್ಕೊಂಡಿದ್ದೆ, ಆದರೆ,ಮತ್ತೆ ಅದನ್ನೇ ಮುಂದುವರಿಸಿದ್ದಾರೆ, ಹೀಗಾಗಿ ಅಂತವರ ಬಗ್ಗೆ ಮಾತಾಡೋದೆ ಬಿಡಬೇಕು ಎಂದಯ ಅಸಮಾಧಾನ ಹೊರಹಾಕಿದರು.
ನವೆಂಬರ್ ನಲ್ಲಿ ಮದುವೆ: ನವೆಂಬರ್ 23-24 ರಂದು ವಿವಾಹ ಮಾಡಬೇಕು ಎಂದು ಹಿರಿಯರು ನಿಶ್ಚಯಿಸಿದ್ದಾರೆ, ತೋರ್ಪಡಿಕೆಗಾಗಿ 50 ಸಾವಿರ ಜನರನ್ನು ಕರೆಯದೇ ಸಣ್ಣ ಸಮಾರಂಭದಲ್ಲಿ ಮದುವೆ ಆಗುತ್ತೇನೆ, ಅದ್ಧೂರಿತನಕ್ಕಿಂತ ಹೇಗೆ ಅರ್ಥಪೂರ್ಣವಾಗಿ ಜೀವನ ನಡೆಸುತ್ತೇವೆ ಎನ್ನುವುದು ಮುಖ್ಯ ಎಂದರು.
ನವೆಂಬರ್ 4ಕ್ಕೆ ಹೊಸ ಚಿತ್ರ: ಇದೇ ನ. 4 ರಂದು ಕರ್ನಾಟಕ ಅಳಿಯ ಚಿತ್ರ ಬಿಡುಗಡೆ ಆಗಲಿದೆ. ಅಪ್ಪು ಕೊನೆಯ ಬಾರಿ ಮೆಚ್ಚಿದ ಚಿತ್ರ ಇದಾಗಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಗೆಟಪ್ ನ್ನು ತೀರಾ ಮೆಚ್ಚಿಕೊಂಡಿದ್ದರು ಅದು ನನಗೆ ಹೆಮ್ಮೆ ಇದೆ, ಕೊಳ್ಳೇಗಾಲ, ಹನೂರು ಭಾಗದ ಭಾಷೆಯಲ್ಲಿ ಚಿತ್ರ ಮೂಡಿಬಂದಿದ್ದು ವಾಮಾಚಾರ, ಕಾಮಿಡಿ ಎಲ್ಲವೂ ಈ ಚಿತ್ರದಲ್ಲಿದೆ ಎಂದು ತಿಳಿಸಿದರು.