ನಟಿ ಅಲಿಯಾ ಭಟ್‌ ಡೀಪ್‌ ಫೇಕ್‌ ವಿಡಿಯೋ ವೈರಲ್:‌ ನಟಿಯರಿಗೆ ಸವಾಲಾಗುತ್ತಿರುವ ಡೀಪ್‌ ಫೇಕ್‌ ವಿಡಿಯೋ - Mahanayaka
5:32 AM Wednesday 10 - December 2025

ನಟಿ ಅಲಿಯಾ ಭಟ್‌ ಡೀಪ್‌ ಫೇಕ್‌ ವಿಡಿಯೋ ವೈರಲ್:‌ ನಟಿಯರಿಗೆ ಸವಾಲಾಗುತ್ತಿರುವ ಡೀಪ್‌ ಫೇಕ್‌ ವಿಡಿಯೋ

alia bhat
27/11/2023

ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಡೀಪ್‌ ಫೇಕ್‌ ವಿಡಿಯೋಗಳನ್ನು ಸೃಷ್ಟಿಸಿ ಪ್ರತಿಷ್ಠಿತ ನಟಿಯರಿಗೆ ಕಿರುಕುಳ ನೀಡುತ್ತಿರುವ ಪ್ರಕರಣ ಮುಂದುವರಿದಿದ್ದು, ರಶ್ಮಿಕಾ ಮಂದಣ್ಣ, ಬಾಲಿವುಡ್‌ ನಟಿ ಕತ್ರಿನಾ ಕೈಫ್‌, ಕಾಜೋಲ್‌ ಬಳಿಕ ಇದೀಗ ಅಲಿಯಾ ಭಟ್‌ ಅವರ ಡೀಪ್‌ ಫೇಕ್‌ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೇರೊಬ್ಬರ ದೇಹಕ್ಕೆ ಅಲಿಯಾ ಭಟ್‌ ಮುಖವನ್ನು ಹೊಂದಿಸಿ ಡೀಪ್‌ ಫೇಕ್‌ ವಿಡಿಯೋ ಸೃಷ್ಟಿಸಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇತ್ತೀಚೆಗೆ ಡೀಪ್‌ ಫೇಕ್‌ ವಿಡಿಯೋಗಳ ಹಾವಳಿ ಪ್ರತಿಷ್ಠಿತ ವ್ಯಕ್ತಿಗಳು, ಚಿತ್ರ ನಟಿಯರಿಗೆ ಒಂದು ಸವಾಲಾಗಿ ಪರಿಣಮಿಸುತ್ತಿದೆ. ತಂತ್ರಜ್ಞಾನಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಿರಂತರವಾಗಿ ಮುಂದುವರಿದಿದೆ. ಈ ಬಗ್ಗೆ ಸರಿಯಾದ ಕಾನೂನು ಕ್ರಮಕೈಗೊಳ್ತಾ ಇಲ್ಲ ಎನ್ನುವ ಆಕ್ರೋಶ ಕೂಡ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ