ತಮಿಳುನಾಡಿನ ರಾಜಕೀಯ ಮುಖಂಡನ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಖ್ಯಾತ ನಟಿಗೆ ಮದ್ರಾಸ್ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದ್ಯಾಕೆ..? - Mahanayaka
12:43 AM Saturday 23 - August 2025

ತಮಿಳುನಾಡಿನ ರಾಜಕೀಯ ಮುಖಂಡನ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಖ್ಯಾತ ನಟಿಗೆ ಮದ್ರಾಸ್ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದ್ಯಾಕೆ..?

27/09/2023


Provided by

ತಮಿಳುನಾಡಿನ ರಾಜಕೀಯ ಮುಖಂಡ ಸೀಮನ್ ವಿರುದ್ಧ ಗರ್ಭಪಾತಕ್ಕೆ ಒತ್ತಾಯ ಮತ್ತು ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದ ನಟಿ ವಿಜಯಲಕ್ಷ್ಮಿ ಅವರಿಗೆ ಮದ್ರಾಸ್ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಸೀಮನ್ ತಮ್ಮನ್ನು 2011ರಲ್ಲಿ ಮದುವೆಯಾಗಿ ಹಲವಾರು ಹಿಂಸೆಗಳನ್ನು ಕೊಟ್ಟಿದ್ದರು ಎಂದು ನಟಿ ಪೊಲೀಸರಿಗೆ ದೂರು ನೀಡಿ 2012ರಲ್ಲಿ ಕೇಸನ್ನು ಹಿಂದಕ್ಕೆ ಪಡೆದಿದ್ದರು. ಆದರೆ ಇತ್ತೀಚೆಗೆ ತಾವು ನೀಡಿದ್ದ ಹಳೆಯ ದೂರನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದು ಸೀಮನ್‍ ಗೆ ನೊಟೀಸ್ ಜಾರಿ ಮಾಡಲಾಗಿತ್ತು.

ಆದರೆ ಮತ್ತೆ ನಟಿ ವಿಜಯಲಕ್ಷ್ಮಿ ದೂರನ್ನು ವಾಪಸ್ಸು ಪಡೆದು ಸೀಮನ್ ವಿರುದ್ಧ ನಾನು ಸೋಲು ಒಪ್ಪಿಕೊಂಡು ಕೇಸ್ ಮರಳಿ ಪಡೆಯುತ್ತೇನೆ. ತಮಿಳುನಾಡು ಬಿಟ್ಟು ಹೋಗುತ್ತೇನೆ. ಸೀಮನ್ ನ ರಾಜಕೀಯ ಭವಿಷ್ಯ ಚೆನ್ನಾಗಿರಲಿ ಎಂದು ಹೇಳಿ ಕೇಸ್ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದರು. ಅವರು ಕೇಸ್ ಹಿಂಪಡೆದ ವಿಚಾರವನ್ನು ಪೊಲೀಸರು ಕೋರ್ಟ್ ಗೆ ಸಲ್ಲಿಸಿದ್ದರು. ಹೀಗಾಗಿ ಕೋರ್ಟ್ ವಿಜಯಲಕ್ಷ್ಮಿ ಅವರಿಗೆ ಸೆಪ್ಟೆಂಬರ್ 29ರಂದು ಕೋರ್ಟ್ ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ಇತ್ತೀಚಿನ ಸುದ್ದಿ