ಅದಾನಿ ಗ್ರೂಪ್ ನ ಷೇರುಗಳ ಮೌಲ್ಯ ಶೇ.10ಕ್ಕೆ ಕುಸಿತಕ್ಕೆ ಕಾರಣ ಏನು? - Mahanayaka

ಅದಾನಿ ಗ್ರೂಪ್ ನ ಷೇರುಗಳ ಮೌಲ್ಯ ಶೇ.10ಕ್ಕೆ ಕುಸಿತಕ್ಕೆ ಕಾರಣ ಏನು?

adani
28/01/2023

ಗೌತಮ್ ಅದಾನಿ ಬ್ಯುಸಿನೆಸ್ ಸಾಮ್ರಾಜ್ಯಕ್ಕೆ ಬಹು ದೊಡ್ಡ ಆಘಾತವಾಗಿದ್ದು, ಅಕೌಂಟಿಂಗ್ ಫ್ರಾಡ್(ಲೆಕ್ಕಪತ್ರ ವಂಚನೆ) ಸೇರಿದಂತೆ ಹಲವು ಅವ್ಯವಹಾರಗಳು ಬಯಲಾದ ಬೆನ್ನಲ್ಲೇ ಅದಾನಿ ಗ್ರೂಪ್ ನ ಷೇರುಗಳ ಮೌಲ್ಯ ಶೇ.10ಕ್ಕೆ ಕುಸಿತ ಕಂಡಿದೆ.


Provided by

ಷೇರುಗಳ ಕುಸಿತದ ಪರಿಣಾಮ ಅದಾನಿ ಗ್ರೂಪ್ ಗೆ 46 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಲೆಕ್ಕಪತ್ರಗಳಲ್ಲಿ ವಂಚನೆ, ಅಕ್ರಮ ಹಣ ವರ್ಗಾವಣೆ ಮೊದಲಾದ ಆರೋಪಗಳಿಗೆ ಸಂಬಂಧಿಸಿದಂತೆ ಹಿಂಡನ್ ಬರ್ಗ್ ರಿಸರ್ಚ್ ಎಂಬ ಹೂಡಿಗೆ ಸಂಸ್ಥೆ 2 ವರ್ಷಗಳ ಕಾಲ ಸಂಶೋಧನೆ ನಡೆಸಿದ್ದು, ಕಂಪೆನಿಯ ಹಿರಿಯ ಅಧಿಕಾರಿಗಳನ್ನು ವಿಚಾರಣೆ ನಡೆಸಿತ್ತು. ಕಂಪೆನಿಯ ಸಾವಿರಾರು ಲೆಕ್ಕ ಪತ್ರಗಳನ್ನು ಪರಿಶೀಲಿಸಲಾಗಿತ್ತು.

ಈ ವೇಳೆ ಅದಾನಿ ಸಮೂಹವು ಹಲವಾರು ಸುಳ್ಳು ಲೆಕ್ಕ ಪತ್ರಗಳನ್ನು, ಅಕ್ರಮ ಹಣ ವರ್ಗಾವಣೆ, ಷೇರುಗಳ ಮೌಲ್ಯದಲ್ಲಿ ವ್ಯತ್ಯಾಸವನ್ನು ಮಾಡಿದೆ. ಇದಕ್ಕೆ ಅಲ್ಲಿನ ಸರ್ಕಾರದಲ್ಲಿ ತನ್ನ ವ್ಯಕ್ತಿಗಳನ್ನು ನೇಮಿಸಿ ಕೊಂಡಿದೆ. ಇದರಿಂದಾಗಿ 3 ವರ್ಷದಲ್ಲಿ ಅದಾನಿಯ ಆದಾಯ 100 ಬಿಲಿಯನ್ ನಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.

ಇನ್ನೂ ಈ ಆರೋಪಗಳನ್ನು ಅದಾನಿ ಗ್ರೂಪ್ ತಳ್ಳಿ ಹಾಕಿದ್ದು, ಈ ಆರೋಪಗಳು ಆಧಾರ ರಹಿತವಾಗಿದೆ ಎಂದು ಹೇಳಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ