ನೀವಿನ್ನೂ ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಲ್ಲವೇ? | ಹಾಗಿದ್ದರೆ ಈ ಸುದ್ದಿ ತಪ್ಪದೇ ಓದಿ - Mahanayaka
10:15 PM Thursday 16 - October 2025

ನೀವಿನ್ನೂ ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಲ್ಲವೇ? | ಹಾಗಿದ್ದರೆ ಈ ಸುದ್ದಿ ತಪ್ಪದೇ ಓದಿ

aadhar pan link
26/03/2021

ನವದೆಹಲಿ: ಮಾರ್ಚ್ 31ರೊಳಗೆ ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್  ಸಂಖ್ಯೆ ಲಿಂಕ್ ಮಾಡದಿದ್ದರೆ. ಜನರು 1000 ಸಾವಿರ ದಂಡ ಪಾವತಿಯ ಜೊತೆಗೆ ತಮ್ಮ  ಪ್ಯಾನ್ ಕಾರ್ಡ್ ಕೂಡ ಅಮಾನ್ಯವಾಗಬಹುದು.


Provided by

2021ರ ಹಣಕಾಸು ಮಸೂದೆಯಲ್ಲಿ ಈ ಹೊಸ ತಿದ್ದುಪಡಿಯನ್ನು ಪರಿಚಯಿಸಲಾಗಿದೆ. 2021ರ ಹಣಕಾಸು ಮಸೂದೆಯನ್ನು ಅಂಗೀಕರಿಸುವಾಗ 2021ರ ಮಾರ್ಚ್ 31ರೊಳಗೆ ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಸಂಖೆಯನ್ನು ಲಿಂಕ್ ಮಾಡದಿರುವವರಿಗೆ ದಂಡ ವಿಧಿಸುವ ಅಂಶವನ್ನು ಸೇರ್ಪಡೆಗೊಳಿಸಲಾಗಿದೆ ಎಂದು ವರದಿಯಾಗಿದೆ.

ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ವಿಫಲವಾದವರಿಗೆ 1 ಸಾವಿರ ರೂಪಾಯಿಗಳ ವರೆಗೆ ದಂಡ ವಿಧಿಸಬಹುದಾಗಿದೆ. ಆದರೆ 1 ಸಾವಿರಕ್ಕಿಂತ ಹೆಚ್ಚು ಈ ದಂಡದ ಮೊತ್ತ ಏರಿಕೆಯಾಗುವುದಿಲ್ಲ. ದಂಡದ ಮೊತ್ತವನ್ನು ಸರ್ಕಾರವೇ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ