ಆದಿ ಉಡುಪಿ: ಡಾ.ಬಿ.ಆರ್.ಅಂಬೇಡ್ಕರ ಅವರ 65ನೇ ಮಹಾಪರಿನಿಬ್ಬಾಣ ದಿನ ನಮನ | BSI ಪದಾಧಿಕಾರಿಗಳ ಪದಗ್ರಹಣ ಸಮಾರಂಭ - Mahanayaka
1:20 PM Wednesday 15 - October 2025

ಆದಿ ಉಡುಪಿ: ಡಾ.ಬಿ.ಆರ್.ಅಂಬೇಡ್ಕರ ಅವರ 65ನೇ ಮಹಾಪರಿನಿಬ್ಬಾಣ ದಿನ ನಮನ | BSI ಪದಾಧಿಕಾರಿಗಳ ಪದಗ್ರಹಣ ಸಮಾರಂಭ

budha
08/12/2021

ಉಡುಪಿ: ಇಲ್ಲಿನ  ಆದಿ ಉಡುಪಿಯ ಜಿಲ್ಲಾ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆದಿತ್ಯವಾರ ಬಾಬಾ ಸಾಹೇಬ್  ಡಾ.ಬಿ.ಆರ್.ಅಂಬೇಡ್ಕರ ಅವರ 65ನೇ ಮಹಾಪರಿನಿಬ್ಬಾಣ ದಿನದ ನಮನ ಹಾಗೂ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರಿಂದ 1954ರಲ್ಲಿ ಸ್ಥಾಪಿಸಲ್ಪಟ್ಟ ಬುದ್ಧಿಸ್ಟ್ ಸೊಸೈಟಿ ಅಫ್ ಇಂಡಿಯ ಇದರ ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.


Provided by

ಬೋಧಿರತ್ನ ಬಂತೇಜಿ ಹಾಗೂ ಬಿಕ್ಕುಣಿ ವಂದನಾ ಮಾತಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬುದ್ಧವಂದನೆ ನೆರವೇರಿಸಿ ಧಮ್ಮೋಪದೇಶ ನೀಡಿದರು. ಬೋಧಿರತ್ನ ಬಂತೇಜಿ  ಉಪಾಸಕ ಉಪಾಸಾಕಿಯರಿಗೆ ತಿಸರಣ, ಪಂಚಾಶೀಲಾ ಮತ್ತು ಬಾಬಾಸಾಹೇಬರ 22 ಪ್ರತಿಜ್ಞೆಗಳನ್ನು ಬೋಧಿಸಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.

ವಂದನಾ ಮಾತಾಜಿ  ಮಾತನಾಡಿ, ಬುದ್ಧರ ಮಧ್ಯಮ ಮಾರ್ಗದ ಚಿಂತನೆಯನ್ನು ಪ್ರಚುರಪಡಿಸಿದರು. ಜಗತ್ತಿನಲ್ಲಿ ದುಃಖವಿದೆ, ದುಃಖಕ್ಕೆ ಕಾರಣವಿದೆ, ದುಃಖ ನಿವಾರಣೆಯ ಮಾರ್ಗವಿದೆ, ದುಃಖ ಉಂಟಾಗದಂತೆ ಬದುಕುವ ಮಾರ್ಗವೇ ಭಗವಾನ್ ಬುದ್ಧರ ಮಧ್ಯಮ ಮಾರ್ಗ ಎಂದು ಬೋಧಿಸಿದರು. ಬುದ್ಧರ ಚಿಂತನೆಗಳು ಮನುಷ್ಯ ಕೇಂದ್ರಿತವಾಗಿರುವ ಮನುಷ್ಯನನ್ನು ನೈತಿಕ ಬದುಕಿಗೆ ಪ್ರೆರೇಪಿಸುವ ಉದಾತ್ತ ಗುಣಗಳನ್ನು ಹೊಂದಿದೆ ಎಂದು ಹೇಳಿದರು.

ಇದೇ ವೇಳೆ ನಾಗಸಿದ್ದಾರ್ಥ ಹೊಲೆಯಾರ್ ಅವರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ನುಡಿನಮನ ಸಲ್ಲಿಸಿದರು. ಬಳಿಕ ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಇದರ ರಾಜ್ಯ ಸಮಿತಿ ಪ್ರತಿನಿದಿಯಾಗಿ ಭಾಗವಹಿಸಿದ BSI ರಾಜ್ಯ ಪ್ರತಿನಿಧಿ ಸಮತಾ ಸೈನಿಕ ದಳದ ರಾಜ್ಯ ಕಾರ್ಯದರ್ಶಿ ವಿರೂಪಾಕ್ಷ ಎಫ್. ಮೇತ್ರಿಯವರು ಜಿಲ್ಲಾ ಸಮಿತಿ ಪದಾಧಿಕಾರಿಗಳಿಗೆ ದಮ್ಮದ ಶಾಲು ಹೊದಿಸಿ ಶುಭಾಶಯ ಕೋರಿದರು. ಅಧ್ಯಕ್ಷರಾದ ರಾಘವೇಂದ್ರ ಜಿ. ಹಾಗೂ ಪ್ರಧಾನ ಕಾರ್ಯದರ್ಶಿ ರಮೇಶ್ ರವರು ಇತರ ಪದಾಧಿಕಾರಿಗಳೊಂದಿಗೆ ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಇದರ ಜಿಲ್ಲಾ ಸಮಿತಿಯ ಜವಾಬ್ದಾರಿಗಳನ್ನು ವಹಿಸಿಕೊಂಡರು.

ಬಂತೇಜಿಯವರ ಸಮ್ಮುಖದಲ್ಲಿ 2022 ನೇ ವರ್ಷದ BSI ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಧಮ್ಮಾಚಾರಿ ಎಸ್.ಆರ್.ಲಕ್ಷಣ, ಜಯನ್ ಮಲ್ಪೆ, ಮಂಜುನಾಥ ಗಿಳಿಯಾರ, ಶೇಖರ ಹಾವಂಜೆ ಮತ್ತು ಫ್ಯಾಮಿಲಿ, ರಮೇಶ ಕೋಟ್ಯಾನ್, ಸುರೇಶ್ ಬಾರ್ಕೂರು, ಕೃಷ್ಣ LIC ಉಪಸ್ಥಿತರಿದ್ದರು.

ಖಜಾಂಚಿ ರವೀಂದ್ರ ಬಂಟಕಲ್  ಸ್ವಾಗತಿಸಿದರು, ಮಂಜುನಾಥ್ ವಿ. ಪ್ರಸ್ತಾವನೆ ಮಾಡಿದರು, BSI ದ.ಕ. ಖಜಾಂಚಿ ಮನೋಹರ ಧನ್ಯವಾದ ಸಮರ್ಪಣೆ ಮಾಡಿ ವಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸೇನಾ ಹೆಲಿಕಾಫ್ಟರ್ ಪತನ: ಬಿಪಿನ್ ರಾವತ್ ಪತ್ನಿ ಮಧುಲಿಕಾ ಮೃತ್ಯು?, ಬಿಪಿನ್ ರಾವತ್ ಸ್ಥಿತಿ ಗಂಭೀರ!

ಮೊಟ್ಟೆ ಯೋಜನೆ ಕೈ ಬಿಡದಿದ್ದರೆ, ಬೀದಿಗಿಳಿದು ಹೋರಾಟ: ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟ

ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ | ಡೆತ್ ನೋಟ್ ಆಧಾರದಲ್ಲಿ ಓರ್ವ ಮಹಿಳೆ ಪೊಲೀಸ್ ವಶಕ್ಕೆ

ಬಿಪಿನ್ ರಾವತ್ ಸೇರಿದಂತೆ 9 ಮಂದಿಯಿದ್ದ ಸೇನಾ ವಿಮಾನ ಪತನ: ನಾಲ್ವರ ಮೃತದೇಹ ಪತ್ತೆ, ಮೂವರ ಸ್ಥಿತಿ ಗಂಭೀರ

ಕೊವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕ್ರಮ: ಸಿಎಂ ಬೊಮ್ಮಾಯಿ ಹೇಳಿದ್ದೇನು?

ನನ್ನ ಅಸಮಾಧಾನ ‘ಮೋದಿಯ ನೀತಿ’ಗಳ ವಿರುದ್ಧ, ಬಿಜೆಪಿಯ ವಿರುದ್ಧವಲ್ಲ | ಮಂಗಳೂರಿನಲ್ಲಿ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿಕೆ

ಇತ್ತೀಚಿನ ಸುದ್ದಿ