ಆದಿವಾಸಿಗಳು ಹಿಂದೂಗಳಾಗಲು ಸಾಧ್ಯವೇ ಇಲ್ಲ: ಜಾರ್ಖಂಡ್ ಮುಖ್ಯಮಂತ್ರಿ ಹೇಳಿಕೆ! - Mahanayaka
10:15 PM Thursday 11 - December 2025

ಆದಿವಾಸಿಗಳು ಹಿಂದೂಗಳಾಗಲು ಸಾಧ್ಯವೇ ಇಲ್ಲ: ಜಾರ್ಖಂಡ್ ಮುಖ್ಯಮಂತ್ರಿ ಹೇಳಿಕೆ!

23/02/2021

ಜಾರ್ಖಂಡ್:  ಆದಿವಾಸಿಗಳು ಎಂದಿಗೂ ಹಿಂದೂಗಳಲ್ಲ. ಅವರು ಎಂದಿಗೂ ಹಿಂದೂಗಳಾಗಲು ಸಾಧ್ಯವೂ ಇಲ್ಲ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯದ 18ನೇ ವಾರ್ಷಿಕ ಭಾರತ ಸಮ್ಮೇಳನದಲ್ಲಿ ಬುಡಕಟ್ಟು ಜನಾಂಗದವರು ಹಿಂದೂಗಳೇ? ಎಂಬ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ರಾಜ್ಯದಲ್ಲಿ 32 ಬುಡಕಟ್ಟು ಸಮುದಾಯಗಳಿವೆ. ಆದರೂ ಅವರ ಭಾಷೆ, ಸಂಸ್ಕೃತಿಯನ್ನು ಉತ್ತೇಜಿಸುವ ಕೆಲಸಗಳಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮುಂದಿನ ಜನಗಣತಿಯಲ್ಲಿ ಆದಿವಾಸಿಗಳಿಗೆ ಪ್ರತ್ಯೇಕ ಅಂಕಣವನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಕೇಂದ್ರ ಸರ್ಕಾರವು, ಹಿಂದೂ, ಸಿಖ್ , ಜೈನ್, ಮುಸ್ಲಿಮ್, ಕ್ರಿಶ್ಚಿಯನ್ ಎಂದು ಬರೆಯಬೇಕು ಎಂದು ಇತರರು ಎಂಬ ಕಾಲಂನ್ನು ತೆಗೆದು ಹಾಕಿದೆ. ಇದನ್ನು ಸರಿಪಡಿಸಬೇಕು ಎಂದು ಅವರು ಹೇಳಿದರು.

ಆದಿವಾಸಿಗಳು ಎಂದಿಗೂ ಹಿಂದೂಗಳಲ್ಲ ಮತ್ತು ಅವರು ಹಿಂದೂಗಳಾಗಲೂ ಸಾಧ್ಯವಿಲ್ಲ. ಮುಂದಿನ ಜನಗಣತಿಯಲ್ಲಿ ಅವರಿಗೆ ಪ್ರತ್ಯೇಕ ಕಾಲಂ ಒದಗಿಸಬೇಕು. ಆ ಮೂಲಕ ಅವರ ಸಂಸ್ಕೃತಿ ಯನ್ನು ಕಾಪಾಡಬೇಕು. ಪ್ರಕೃತಿಯ ಆರಾಧಕರಾಗಿರುವ ಆದಿವಾಸಿಗಳು ಎಂದಿಗೂ ಹಿಂದೂಗಳಾಗಲು ಸಾಧ್ಯವಿಲ್ಲ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದು ಹೇಮಂತ್ ಸೊರೆನ್ ಹೇಳಿದರು

ಇತ್ತೀಚಿನ ಸುದ್ದಿ