ಜೇನುನೊಣ ಕಡಿದು ಮೃತಪಟ್ಟ  ಆದಿವಾಸಿಯ ಮೃತದೇಹಕ್ಕೆ ಘೋರ ಅವಮಾನ - Mahanayaka
7:44 AM Monday 15 - September 2025

ಜೇನುನೊಣ ಕಡಿದು ಮೃತಪಟ್ಟ  ಆದಿವಾಸಿಯ ಮೃತದೇಹಕ್ಕೆ ಘೋರ ಅವಮಾನ

01/12/2020

ವಯನಾಡು: ಜೇನುನೊಣಗಳು ಕಡಿದು ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರು ಕೇರಳದ ವಯನಾಡಿನಲ್ಲಿ ಸಾವಿಗೀಡಾಗಿದ್ದು, ಇವರ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಮಾಡದೇ ಮೃತದೇಹಕ್ಕೆ ಅವಮಾನ ಮಾಡಿರುವ ಅಮಾನವೀಯ ಘಟನೆ ನಡೆದಿದೆ.


Provided by

ಕೆನಿಚಿರಾ ಡೈರಿ ಕಾಲೋನಿಯ ಗೋಪಾಲನ್ ಎಂಬವರು ಜೇನುನೊಣಗಳು ಕಡಿದ ಪರಿಣಾಮ ಮೃತಪಟ್ಟಿದ್ದರು. ಇವರ ಮೃತದೇಹವನ್ನು ಮೊದಲು ಮರಣೋತ್ತರ ಪರೀಕ್ಷೆಗಾಗಿ ಬಾಥರಿ ತಾಲೂಕಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಲ್ಲಿ ಸರ್ಜನ್ ಇಲ್ಲ ಎಂಬ ನೆಪ ಹೇಳಿ ವಾಪಸ್ ಕಳುಹಿಸಲಾಗಿತ್ತು. ಆ ಬಳಿಕ ಕೋಝೀಕೋಡ್ ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ತಂದಿದ್ದು, ಅಲ್ಲಿಯೂ ಸರ್ಜನ್ ಇಲ್ಲ ಎಂಬ ನೆಪ ಹೇಳಿ ಮೃತದೇಹವನ್ನು ವಾಪಸ್ ಕಳುಹಿಸಲಾಗಿದೆ.

ಮರಣೋತ್ತರ ಪರೀಕ್ಷೆ ವಿಳಂಬವಾಗಿರುವುದರಿಂದ, ಶವಗಾರದಲ್ಲಿ ಮೃತದೇಹವನ್ನು ಸುರಕ್ಷಿತವಾಗಿಡದ ಕಾರಣ ಮೃತದೇಹವು ಕೊಳೆಯಲು ಆರಂಭವಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲು ಎರಡು ದಿನಗಳವರೆಗೆ ಕುಟುಂಬಸ್ಥರನ್ನು ಕಾಯಿಸಲಾಗಿದ್ದು, ಇದರಿಂದಾಗಿ ಆದಿವಾಸಿ ವ್ಯಕ್ತಿಯೊಬ್ಬರ ಮೃತದೇಹಕ್ಕೆ ತೀವ್ರ ಅವಮಾನ ಎಸಗಲಾಗಿದೆ ಎಂದು ಕೇರಳಾದ್ಯಂತ ವ್ಯಾಪಕ ಆಕ್ರೋಶಗಳು ಕೇಳಲಿ ಬಂದ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ

ಇತ್ತೀಚಿನ ಸುದ್ದಿ