ಅಡುಗೆ ಕೋಣೆಗೆ ನುಗ್ಗಿ ಅತ್ತೆಯ ಮೇಲೆಯೇ ಘೋರ ಕೃತ್ಯ ಎಸಗಿದ ಸೋದರಳಿಯ!
ಮೀರತ್: : ಉತ್ತರಪ್ರದೇಶದ ಮೀರತ್ ಘೋರ ಘಟನೆಯೊಂದು ನಡೆದಿದ್ದು, ಅತ್ತೆಯನ್ನು ಅತ್ಯಾಚಾರಕ್ಕೆ ಯತ್ನಿಸಿ ವಿಫಲವಾದ ಸೋದರಳಿಯ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಮೀರತ್ ನ ಜಾನಿ ಗ್ರಾಮದ ನಿವಾಸಿಯಾಗಿರುವ ಮಹಿಳೆಯ ಮನೆಗೆ ಬಂದ ಆರೋಪಿ ಈ ಕೃತ್ಯ ಎಸಗಿದ್ದಾನೆ. ಮಹಿಳೆಯ ಮಕ್ಕಳು ಮನೆಯಿಂದ ಹೊರಹೋಗಿದ್ದರು. ಈ ಸಂದರ್ಭದಲ್ಲಿ ಆರೋಪಿ ಮನೆಗೆ ಬಂದಿದ್ದಾನೆ.
ಅತ್ತೆ ಒಬ್ಬಂಟಿಯಾಗಿದ್ದಾಳೆ ಎಂದು ತಿಳಿಯುತ್ತಿದ್ದಂತೆಯೇ ಅಡುಗೆ ಮಾಡುತ್ತಿದ್ದ ಅತ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈತನ ಕೃತ್ಯದಿಂದ ಕೋಪಗೊಂಡ ಅತ್ತೆ, ಆತನ ಕೆನ್ನೆಗೆ ಬಾರಿಸಿದ್ದಾರೆ. ಈ ವೇಳೆ ಮಹಿಳೆ ಮನೆಯವರಿಗೆ ವಿಚಾರ ತಿಳಿಸಬಹುದು ಎಂದು ಹೆದರಿ ಅತ್ತೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಅತ್ತೆಯ ಮೇಲೆ ಕಣ್ಣಿರಿಸಿದ್ದ ಆರೋಪಿ ಇದಕ್ಕೂ ಮೊದಲು ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಹೇಳಲಾಗಿದೆ. ಆದರೆ ಆಕೆ ಈ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸಿರಲಿಲ್ಲ. ಬುಧವಾರವು ಇದೇ ಘಟನೆ ಮರುಕಳಿಸಿದೆ. ಈ ವೇಳೆ ಮಹಿಳೆಯ ಹತ್ಯೆ ನಡೆದಿದೆ.
ಕೊಲೆಗಾರನ ಬೆನ್ನತ್ತಿ ಹೋದ ಪೊಲೀಸರು ಮೊದಲು ಜಾನಿ ಗ್ರಾಮದಲ್ಲಿರುವ ಆಕೆಯ ಸಂಬಂಧಿಕರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಯ ಕೈಯಲ್ಲಿ ತರಚು ಗಾಯಗಳು ಮತ್ತೆಯಾಗಿದೆ. ತಕ್ಷಣವೇ ಆತನನ್ನು ಪೊಲೀಸರು ಸ್ಪಷ್ಟವಾಗಿ ಗಮನಿಸಿದಾಗ ಆತನ ಚಪ್ಪಲಿಯಲ್ಲಿ ರಕ್ತದ ಕಲೆ ಪತ್ತೆಯಾಗಿದೆ. ಇದರಿಂದಾಗಿ ಈತನ ಕೃತ್ಯ ಬಯಲಾಗಿದೆ.
ಇನ್ನೂ ಮಹಿಳೆ ಸಾವಿಗೂ ಮೊದಲು ಆರೋಪಿಯ ಜೊತೆ ಭೀಕರವಾಗಿ ಹೋರಾಡಿದ್ದರು ಎಂದು ಹೇಳಲಾಗಿದೆ. ಆದರೆ ಆರೋಪಿಯು ಮಹಿಳೆಯನ್ನು ಹತ್ಯೆ ಮಾಡಿದ್ದಾನೆ.


























