ಭದ್ರಾ ನದಿಯೊಳಗೆ ಸಾಹಸಭರಿತ ರಿವರ್ ರಾಫ್ಟಿಂಗ್: ಸ್ಥಳೀಯರಿಂದ ಆಕ್ರೋಶ - Mahanayaka
5:48 PM Thursday 16 - October 2025

ಭದ್ರಾ ನದಿಯೊಳಗೆ ಸಾಹಸಭರಿತ ರಿವರ್ ರಾಫ್ಟಿಂಗ್: ಸ್ಥಳೀಯರಿಂದ ಆಕ್ರೋಶ

river rafting
21/07/2024

ಚಿಕ್ಕಮಗಳೂರು: ಮಲೆನಾಡ ಮಳೆಗೆ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ.  ಇದೀಗ  ಭದ್ರಾ ನದಿಯೊಳಗೆ ಸಾಹಸಭರಿತ ರಿವರ್ ರಾಫ್ಟಿಂಗ್ ಗಮನ ಸೆಳೆದಿದೆ.


Provided by

ಕಳಸ ತಾಲೂಕಿನ ಕಗ್ಗನಹಳ್ಳ ಬಳಿ ಭದ್ರೆಯ ಒಡಲಲ್ಲಿ ರಿವರ್ ರಾಫ್ಟಿಂಗ್ ಆರಂಭಗೊಂಡಿದೆ. ಅಬ್ಬರಿಸಿಕೊಂಡು ಹರಿಯುತ್ತಿರೋ ಭದ್ರೆಯ ಒಡಲಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುಮತಿಯೊಂದಿಗೆ ನುರಿತ ಹಾಗೂ ಟ್ರೈನಿಂಗ್ ಪಡೆದ ನೇಪಾಳಿ ಯುವಕರು  ರ್ಯಾಫ್ಟಿಂಗ್ ಮಾಡುತ್ತಿದ್ದಾರೆ. 6 ಕಿ.ಮೀ. ಭದ್ರೆಯ ಒಡಲಲ್ಲಿ ರ್ಯಾಫ್ಟಿಂಗ್ ಮಾಡಿ ಪ್ರವಾಸಿಗರು ಸಾಹಸ ಮಾಡಿದರು.

ಜಲಪಾತಗಳು, ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರಿಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಆದರೆ ಭದ್ರೆಯ ಅಬ್ಬರದಲ್ಲಿ ರ್ಯಾಫ್ಟಿಂಗ್  ನಡೆಸಲಾಗುತ್ತಿದೆ. ಇದು ಯಾವ ರೀತಿ ಕ್ರಮ  ಅಂತ ಇದೀಗ  ಪ್ರವಾಸೋದ್ಯಮ ಇಲಾಖೆ ವಿರುದ್ಧ ಕೆಲ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ