ಅಫ್ಘಾನಿಸ್ತಾನದ ಜನರಿಗೆ ಸಹಾಯ ಹಸ್ತ ನೀಡಿದ್ದ ಭಾರತ - Mahanayaka
2:41 AM Wednesday 17 - September 2025

ಅಫ್ಘಾನಿಸ್ತಾನದ ಜನರಿಗೆ ಸಹಾಯ ಹಸ್ತ ನೀಡಿದ್ದ ಭಾರತ

afghan
24/06/2022

ಅಫ್ಘಾನಿಸ್ತಾನ: 1,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ  ಮತ್ತು ಹಲವಾರು ಮನೆಗಳನ್ನು ನಾಶಪಡಿಸಿದ ಭೂಕಂಪದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಜನರಿಗೆ ನೆರವು ಮತ್ತು ಬೆಂಬಲವನ್ನು ನೀಡಲು ಸಿದ್ಧ ಎಂದು ಭಾರತ ಹೇಳಿದೆ.


Provided by

ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸಂತ್ರಸ್ತರಿಗೆ, ಅವರ ಕುಟುಂಬಗಳಿಗೆ ಭಾರತವು ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ. ಮತ್ತು ನೆರವು ಮತ್ತು ಬೆಂಬಲವನ್ನು ನೀಡಲು ತನ್ನ ಸಿದ್ಧತೆಯನ್ನು ವ್ಯಕ್ತಪಡಿಸಿದೆ.

ಅಫ್ಘಾನಿಸ್ತಾನದ ಜನರಿಗಾಗಿ ಭಾರತದ ಮೊದಲ ಹಂತದ ಭೂಕಂಪ ಪರಿಹಾರದ ಸಹಾಯ ಕಾಬೂಲ್ ತಲುಪಿ ಅಲ್ಲಿನ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಬುಧವಾರ ಬೆಳಗ್ಗಿನ ಜಾವ ಅಫ್ಘಾನಿಸ್ತಾನದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು,  ಪಟಿಕಾ ಪ್ರಾಂತ್ಯದ ನಾಲ್ಕು ಜಿಲ್ಲೆಗಳಾದ ಗಯಾನ್, ಬರ್ಮಾಲಾ, ನಾಕಾ, ಸಿರೂಕ್ ಮತ್ತು ಖೋಸ್ಟ್ ಪ್ರಾಂತ್ಯದ ಸ್ಪೆರ್ರಾ ಜಿಲ್ಲೆಯಲ್ಲಿ ಭಾರಿ ಅನಾಹುತ  ಸಂಭವಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಕ್ಕಲಿಗ ಸಮುದಾಯವನ್ನು ನಿರ್ಲಕ್ಷಿಸಿ ಕೆಂಪೇಗೌಡ ಜಯಂತಿ ಆಚರಣೆ ಅರ್ಥಹೀನ: ಸಚಿನ್ ಸರಗೂರು

ಗೃಹಪ್ರವೇಶದ ಮನೆಗೆ ನುಗ್ಗಿ 25 ಸಾವಿರ ಹಣಕ್ಕೆ ಬೇಡಿಕೆಯಿಟ್ಟು ಮಂಗಳಾಮುಖಿಯರಿಂದ ದಾಂಧಲೆ

ಸ್ಕೂಟರ್ ಶೋ ರೂಮ್‌ ನಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂ. ಮೌಲ್ಯದ ಬೈಕ್ ಬೆಂಕಿಗಾಹುತಿ

ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಇತ್ತೀಚಿನ ಸುದ್ದಿ