ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಪೊಲೀಸರಿಂದ ವಾಹನ ತಪಾಸಣೆ ತೀವ್ರ - Mahanayaka

ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಪೊಲೀಸರಿಂದ ವಾಹನ ತಪಾಸಣೆ ತೀವ್ರ

kottigehara
04/05/2025


Provided by

ಕೊಟ್ಟಿಗೆಹಾರ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮರ್ಡರ್ ನ ನಂತರ ರಾಜ್ಯದಲ್ಲಿ ಭದ್ರತಾ ಕ್ರಮಗಳು ತೀವ್ರಗೊಂಡಿದ್ದು, ಚಿಕ್ಕಮಗಳೂರು ಗಡಿಭಾಗವಾದ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಜಾರಿಯಲ್ಲಿದೆ.

ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಗಡಿಭಾಗದ ಪ್ರಮುಖ ಪ್ರವೇಶ ಬಾಗಿಲಾದ ಕೊಟ್ಟಿಗೆಹಾರದಲ್ಲಿ ಇದೀಗ ಪ್ರತಿಯೊಂದು ವಾಹನದ ತಪಾಸಣೆ ನಡೆಸಲಾಗುತ್ತಿದೆ. ಗಸ್ತು ಕಾರ್ಯಾಚರಣೆ ಹೆಚ್ಚಳಗೊಂಡಿದ್ದು, ಶಂಕಿತ ವಾಹನಗಳು ಹಾಗೂ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗುತ್ತಿದೆ.

ಬಣಕಲ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರೇಣುಕಾ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ತಪಾಸಣಾ ಚಟುವಟಿಕೆ ಗಡಿಭಾಗದ ಶಾಂತಿಯುತ ಪರಿಸರವನ್ನು ಕಾಪಾಡಲು ಉದ್ದೇಶಿತವಾಗಿದೆ. “ನಮ್ಮ ಗಡಿಭಾಗವು ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಮಾದರಿ ಆಗಬೇಕು. ಯಾವುದೇ ಬಾಹ್ಯ ಅಶಾಂತಿ ಜಿಲ್ಲೆಗೆ ಪ್ರವೇಶಿಸದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ,” ಎಂದು ಅವರು ತಿಳಿಸಿದ್ದಾರೆ.

ಈ ಕ್ರಮದ ಭಾಗವಾಗಿ ಸಾರ್ವಜನಿಕರನ್ನು ಸಹ ಸಹಕಾರ ನೀಡುವಂತೆ ಪೊಲೀಸರು ವಿನಂತಿಸಿದ್ದಾರೆ. ಜಿಲ್ಲೆಯ ಶಾಂತಿಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ