ಮಹಿಳಾ ಸಹೋದ್ಯೋಗಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ: ಪತ್ನಿ ಮತ್ತು ಸಾರ್ವಜನಿಕರಿಂದ ಥಳಿತ - Mahanayaka

ಮಹಿಳಾ ಸಹೋದ್ಯೋಗಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ: ಪತ್ನಿ ಮತ್ತು ಸಾರ್ವಜನಿಕರಿಂದ ಥಳಿತ

05/08/2024


Provided by

ಇಬ್ಬರು ಪೊಲೀಸ್ ಇನ್ಸ್ ಪೆಕ್ಟರ್ ಗಳ ಮೇಲಿನ ದಾಳಿಯ ಸಂದರ್ಭದಲ್ಲಿ ಮಧ್ಯಪ್ರವೇಶಿಸಲು ವಿಫಲರಾದ ಆರು ಪೊಲೀಸ್ ಅಧಿಕಾರಿಗಳನ್ನು ಆಗ್ರಾದಲ್ಲಿ ಅಮಾನತುಗೊಳಿಸಲಾಗಿದೆ. ಮಹಿಳಾ ಇನ್ಸ್ ಪೆಕ್ಟರ್ ಮನೆಯಲ್ಲಿ ಪುರುಷ ಇನ್ಸ್‌ಪೆಕ್ಟರ್ ರನ್ನು ಆತನ ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದ ನಂತರ ಈ ಘಟನೆ ನಡೆದಿದೆ.

ಮೂಲಗಳ ಪ್ರಕಾರ, ಮಹಿಳಾ ಇನ್ಸ್ ಪೆಕ್ಟರ್ ರಕಾ ಗಂಜ್ ಪೊಲೀಸ್ ಠಾಣೆಯವರಾಗಿದ್ದರೆ, ಪುರುಷ ಇನ್ಸ್‌ಪೆಕ್ಟರ್ ಮುಜಾಫರ್ ನಗರ ಪೊಲೀಸ್ ಠಾಣೆಯವರಾಗಿದ್ದರು.
ಇಬ್ಬರೂ ನೋಯ್ಡಾದಲ್ಲಿ ನಿಯೋಜನೆಗೊಂಡಾಗ ಮೊದಲ ಬಾರಿಗೆ ಭೇಟಿಯಾಗಿದ್ದರು. ಅಲ್ಲದೇ ವಿವಿಧ ಜಿಲ್ಲೆಗಳಿಗೆ ವರ್ಗಾವಣೆಯಾದ ನಂತರ ಇವರಿಬ್ಬರು ರಜೆಯನ್ನು ತೆಗೆದುಕೊಂಡು ಪರಸ್ಪರ ಭೇಟಿಯಾಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ತನ್ನ ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ತಿಳಿದ ನಂತರ ಪುರುಷ ಇನ್ಸ್ ಪೆಕ್ಟರ್ ಪತ್ನಿ ತನ್ನ ಕೆಲವು ಸಂಬಂಧಿಕರೊಂದಿಗೆ ಆಗ್ರಾದಲ್ಲಿರುವ ಮಹಿಳಾ ಇನ್ಸ್ಪೆಕ್ಟರ್ ಮನೆಗೆ ಹೋಗಿದ್ದಾಳೆ.

ಇಬ್ಬರೂ ಹೊರಗೆ ಬರಲು ನಿರಾಕರಿಸಿದಾಗ ಅವರು ಬಾಗಿಲು ಮುರಿದು ಪರಸ್ಪರ ಹಲ್ಲೆ ಮಾಡಿದ್ದಾರೆ. ಪುರುಷ ಇನ್ಸ್‌ಪೆಕ್ಟರ್ ಇತ್ತೀಚೆಗೆ ಜಾಗೃತ ಇಲಾಖೆಗೆ ವರ್ಗಾವಣೆಯಾಗಿದ್ದು, ತನ್ನ ಪ್ರೇಮಿಯೊಂದಿಗೆ ಇರಲು ಆಗ್ರಾಕ್ಕೆ ಬಂದಿದ್ದ ಎಂದು ಅವರ ಪತ್ನಿ ಆರೋಪಿಸಿದ್ದಾರೆ.

ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇನ್ನು ಈ ದಾಳಿಯನ್ನು ತಡೆಯಲು ಪ್ರಯತ್ನಿಸುವ ಬದಲು ಕಾರ್ಯಕ್ರಮವನ್ನು ಚಿತ್ರೀಕರಿಸಿದ ಆರೋಪದ ಮೇಲೆ ಆಗ್ರಾದ ಪೊಲೀಸ್ ಆಯುಕ್ತರು ಇಬ್ಬರು ಸಬ್ ಇನ್ಸ್ ಪೆಕ್ಟರ್ ಗಳು ಸೇರಿದಂತೆ ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ