ಉದ್ಘಾಟನೆಗೂ ಮುನ್ನವೇ ಆಗ್ರಾದ ಜಾಮಾ ಮಸೀದಿ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ..! - Mahanayaka
10:02 AM Thursday 4 - September 2025

ಉದ್ಘಾಟನೆಗೂ ಮುನ್ನವೇ ಆಗ್ರಾದ ಜಾಮಾ ಮಸೀದಿ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ..!

21/02/2024


Provided by

ಆಗ್ರಾದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇದಕ್ಕಾಗಿ ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ. ಯೋಜನೆಯ ಪ್ರಾರಂಭದ ಸಮಯದಲ್ಲಿ ಎಲ್ಲಾ ಮೆಟ್ರೋ ನಿಲ್ದಾಣಗಳ ಹೆಸರುಗಳನ್ನು ಘೋಷಿಸಲಾಗಿದ್ದರೂ, ಉತ್ತರ ಪ್ರದೇಶ ಸರ್ಕಾರವು ಜಾಮಾ ಮಸೀದಿ ಮೆಟ್ರೋ ನಿಲ್ದಾಣವನ್ನು ಹತ್ತಿರದ ಪ್ರಾಚೀನ ಮಂಕಮೇಶ್ವರ ದೇವಾಲಯದ ಗೌರವಾರ್ಥವಾಗಿ ‘ಮಂಕಮೇಶ್ವರ ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ಯುಪಿಎಂಆರ್ ಸಿ ಉಪ ಪ್ರಧಾನ ವ್ಯವಸ್ಥಾಪಕ ಪಂಚನನ್ ಮಿಶ್ರಾ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯಂತೆ, ಹೆಸರನ್ನು ಈಗಾಗಲೇ ಬದಲಾಯಿಸಲಾಗಿದೆ ಮತ್ತು ಹೊಸ ಹೆಸರು ಈಗ ನಿಲ್ದಾಣದ ಮತ್ತು ಸುತ್ತಮುತ್ತಲಿನ ಎಲ್ಲಾ ಸಂಕೇತಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದಿದ್ದಾರೆ.

ಮೊದಲ ಆಗ್ರಾ ಮೆಟ್ರೋ ಕಾರಿಡಾರ್ ನಲ್ಲಿ ಒಟ್ಟು 13 ನಿಲ್ದಾಣಗಳಿವೆ. ಆರು ಆದ್ಯತೆಯ ಕಾರಿಡಾರ್ ನಲ್ಲಿವೆ ಎಂದು ಅವರು ವಿವರಿಸಿದರು. ತಾಜ್‌ಮಹಲ್ ಈಸ್ಟ್ ಗೇಟ್ ಈ ಕಾರಿಡಾರ್ ನ ಮೊದಲ ನಿಲ್ದಾಣವಾಗಿದ್ದರೆ, ಜಾಮಾ ಮಸೀದಿ ಆದ್ಯತೆಯ ಕಾರಿಡಾರ್ ನಲ್ಲಿ ಆರನೇ ಮತ್ತು ಅಂತಿಮ ನಿಲ್ದಾಣವಾಗಿದೆ. ಇದನ್ನು ಈಗ ಮಂಕಮೇಶ್ವರ ನಿಲ್ದಾಣ ಎಂದು ಕರೆಯಲಾಗುತ್ತದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜುಲೈ 2022 ರಲ್ಲಿ ಹೆಸರು ಬದಲಾವಣೆಯ ಉದ್ದೇಶವನ್ನು ವ್ಯಕ್ತಪಡಿಸಿದ್ದರು. ಆದರೆ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆಗ್ರಾ ಮೆಟ್ರೋದ ಆದ್ಯತೆಯ ಕಾರಿಡಾರ್ ಅನ್ನು ಉದ್ಘಾಟಿಸುವ ಕೆಲವೇ ದಿನಗಳ ಮೊದಲು ಈ ಬದಲಾವಣೆಯನ್ನು ಜಾರಿಗೆ ತರಲಾಗಿದೆ.

ಇತ್ತೀಚಿನ ಸುದ್ದಿ